Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಭೀಕರ ರಸ್ತೆ ಅಪಘಾತ : ಐವರು ಪೊಲೀಸ್‌ ಅಧಿಕಾರಿಗಳು ಸಾವು : ಇಬ್ಬರು ಗಾಯ

ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಐವರು ಪೊಲೀಸ್‌ ಅಧಿಕಾರಿಗಳು ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚುರು ಎಂಬಲ್ಲಿ ಇಂದು ಸಂಭವಿಸಿದೆ.

ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಆಗಲಿದ್ದ ಕಾರಣ ಪೊಲೀಸರು ಕಾರಿನಲ್ಲಿ ನಗೌರ್‌ನಿಂದ ಜುಂಜುನುಗೆ ಕರ್ತವ್ಯಕ್ಕಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಪೊಲೀಸರ ವಾಹನ ಅತೀ ವೇಗದಿಂದ ಪ್ರಯಾಣಿಸುತ್ತಿತ್ತು. ಈ ವೇಳೆ ಟ್ರಕ್‌ ವೊಂದು ಓವರ್‌ ಟೇಕ್‌ ಮಾಡಿ ಹೋಗಿದೆ. ಇದೇ ಸಂದರ್ಭದಲ್ಲಿ ಮುಂದೆ ಹೋಗುತ್ತಿದ್ದ ಟ್ರಕ್‌ ಅಚಾನಕ್‌ ಆಗಿ ಬ್ರೇಕ್‌ ಹಾಕಿದೆ. ಪರಿಣಾಮ ಪೊಲೀಸರ ವಾಹನ ಟ್ರಕ್‌ ಗೆ ಹೋಗಿ ಢಿಕ್ಕಿ ಹೊಡೆದಿದೆ. ಇದರಿಂದ ವಾಹನದಲ್ಲಿ ಐವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ತಿಳಿಸಿದೆ.

ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮೃತ ಪೊಲೀಸರೆಲ್ಲ ರಾಜಸ್ಥಾನದ ನಾಗೌರ್ ಜಿಲ್ಲೆಯವರೆಂದು ವರದಿಯಿಂದ ತಿಳಿಯಲಾಗಿದೆ.

No Comments

Leave A Comment