Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಬಿಡುಗಡೆ ಬೆನ್ನಲ್ಲೇ ಮುರುಘಾಶ್ರೀಗೆ ಬಂಧನ ಭೀತಿ: 2ನೇ ಪೋಕ್ಸೋ ಕೇಸ್​ ನಲ್ಲಿ ಅರೆಸ್ಟ್ ವಾರಂಟ್ ಜಾರಿ

ಚಿತ್ರದುರ್ಗ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಒಂದು ವರ್ಷ ಹಿಂದೆ ಜೈಲು ಪಾಲಾಗಿ ನಾಲ್ಕು ದಿನಗಳ ಹಿಂದೆ ಜಾಮೀನು ಮೇಲೆ ಹೊರಬಂದಿದ್ದ ಚಿತ್ರದುರ್ಗದ ಮರುಘಾ ಮಠದ ಡಾ ಶಿವಮೂರ್ತಿ ಮುರುಘಾ ಶರಣರಿಗೆ ಮತ್ತೆ ಬಂಧನ ಭೀತಿ ಎದುರಾಗಿದೆ.

ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಯಾವುದೇ ಕ್ಷಣದಲ್ಲಿ ಶಿವಮೂರ್ತಿ ಮುರುಘಾ ಶರಣರ ಬಂಧನವಾಗುವ ಸಾಧ್ಯತೆಯಿದೆ.

2ನೇ ಪೋಕ್ಸೋ ಕೇಸ್​ನಲ್ಲಿ ಅರೆಸ್ಟ್ ವಾರಂಟ್​​ ಜಾರಿ ಮಾಡಿದ ಕೋರ್ಟ್​​, 1ನೇ ಪೋಕ್ಸೋ ಕೇಸ್​ನಲ್ಲಿ ಹೈಕೋರ್ಟ್​ನಿಂದ ಜಾಮೀನು ಹಿನ್ನೆಲೆ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಬಂಧನದ ಭೀತಿ ಎದುರಾಗಿದೆ.

ಮಠದ ಸುತ್ತ ಬಿಗಿ ಭದ್ರತೆ: ಮುರುಘಾ ಶ್ರೀಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು, ಬೆಂಬಲಿಗರು ಇರುವುದರಿಂದ ಅಹಿತಕರ ಘಟನೆ ನಡೆಯದಂತೆ ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

No Comments

Leave A Comment