ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವರಿಗೆ ಲಕ್ಷತುಳಸಿ,ಉತ್ಸವ ಮೂರ್ತಿಗೆ ಚಿನ್ನಲೇಪಿತ ಕವಚ,ಬೆಳ್ಳಿಹರಿವಣ ಸರ್ಮರ್ಪಣೆ…

ಉಡುಪಿ:ಅನಂತ ವಿಪ್ರ ಬಳಗ ಪಣಿಯಾಡಿವತಿಯಿ೦ದ ಕಾರ್ತಿಕಮಾಸದ ಎರಡನೇ ಭಾನುವಾರದ ದಿನವಾದ ನ.೧೯ರ೦ದು ಪಡಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭದೇವರಿಗೆ ಲಕ್ಷ ತುಳಸಿ ಅರ್ಚನೆಯು ಬೆಳಿಗ್ಗೆ ನಡೆಸಲಾಯಿತು.

ಲಕ್ಷ ತುಳಸೀ ಅರ್ಚನೆಯ ಶುಭ ಸಂದರ್ಭದಲ್ಲಿ ಶ್ರೀ ದೇವರ ಪರಮ ಭಕ್ತ,ಪ್ರತಿ ನಿತ್ಯ ಸಮಯ ಪರಿಪಾಲನೆಯೊಂದಿಗೆ ವಿಷ್ಣು ಪಾರಾಯಣ ಪಠಣಿಗ,ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ,ದೇವಾಲಯದ ಪ್ರತಿ ಕಾರ್ಯಕ್ರಮದ ಅಭಿಮಾನಿ ಉಸ್ತುವಾರಿಗರಾದ ಶ್ರೀನಿವಾಸ ಆಚಾರ್ಯ ಹಾಗೂ ಮನೆಯವರು ದೇವಾಲಯದ ಉತ್ಸವ ಮೂರ್ತಿ(ಬಲಿ)ಗೆ ಚಿನ್ನದ ಲೇಪಿತ ಕವಚವನ್ನು ಅರ್ಪಿಸಲಾಯಿತು. ಇದೇ ಸ೦ದರ್ಭದಲ್ಲಿ ಪಣಿಯಾಡಿಯ ದಿವಂಗತ ಎನ್. ವಿ. ಬಲ್ಲಾಳ್ ಸ್ಮರಣಾರ್ಥ ಶ್ರೀಮತಿ ವಸಂತಿ ಬಲ್ಲಾಳ್ ಮತ್ತು ಮಕ್ಕಳು ದೇವಾಲಯಕ್ಕೆ ರಜತ ಹರಿವಾಣ ಅರ್ಪಿಸಿದರು.

ಸಾಯ೦ಕಾಲ ತುಳಸಿಸ೦ಕೀರ್ತನೆ,ರ೦ಗಪೂಜೆ,ದೀಪಾರಾಧನೆ ಕಾರ್ಯಕ್ರಮವು ಜರಗಿತು.

ಎ೦.ನಾಗರಾಜ ಆಚಾರ್ಯ, ಬಿ.ವಿಜಯರಾಘವ ರಾವ್, ಭಾರತೀಕೃಷ್ಣಮೂರ್ತಿಭಟ್ , ರಾಜೇಶ್ ಪಣಿಯಾಡಿ, ನಾಗರಾಜ್ ಭಟ್ ಪಣಿಯಾಡಿ,ನಾರಾಯಣ ಮಡಿ,ಕೆ.ರಾಘವೇ೦ದ್ರ ಭಟ್, ಶ್ರೀಧರ್ ಭಟ್, ಲಕ್ಷ್ಮೀನಾರಾಯಣ ಆಚಾರ್ಯ, ಯು.ರಾಧಾಕೃಷ್ಣರಾವ್, ಸುಮಿತ್ರಕೆರೆಮಠ,ಎ೦.ವಾಮನ ಭಟ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment