ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣ- ಸಿಸಿಬಿ ವಿಚಾರಣೆ ವೇಳೆ ಚೈತ್ರಾ ತಪ್ಪೊಪ್ಪಿಗೆ
ಬೆಂಗಳೂರು: ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ವೇಳೆ ಚೈತ್ರಾ ತಪ್ಪೊಪ್ಪಿಗೆ ನೀಡಿದ್ದಾರೆ.
ಸಿಸಿಬಿ ಎದುರು ಚೈತ್ರಾ ನೀಡಿದ ಸ್ವ-ಇಚ್ಛಾ ಹೇಳಿಕೆ ಏನು..?, ವಿಷದ ಬಾಟಲಿ ನಾಟಕದ ಬಗ್ಗೆ ಚೈತ್ರಾ ಹೇಳಿದ್ದೇನು..?, ಯಾರ್ಯಾರನ್ನ ಬಳಸಿಕೊಂಡು ಎಲ್ಲೆಲ್ಲಿ ಹಣ ವಸೂಲಿಗೆ ನಿಂತಿದ್ರು ಡೀಲ್ ಮಾಡೋದಕ್ಕೆ ಸಿಮ್ ಖರೀದಿ ಮಾಡಿಸಿಕೊಟ್ಟಿದ್ದು ಯಾರು ಎಂಬುದರ ಇಂಚಿಂಚು ಮಾಹಿತಿ ಲಭಿಸಿದೆ.
ತಪ್ಪೊಪ್ಪಿಗೆ ಪ್ರತಿಯಲ್ಲಿ ಏನಿದೆ..?: 2018ರಲ್ಲಿ ಅಭಿನವ ಹಾಲಶ್ರೀಯನ್ನು ಭೇಟಿ ಮಾಡಿದ್ದೆ. ನನಗೂ ಬಿಜೆಪಿಯ ಕೆಲ ನಾಯಕರು ಗೊತ್ತಿದ್ರಿಂದ ಅಭಿನವ ಹಾಲಶ್ರೀ ನನಗೆ ಒಂದು ಮಾತು ಹೇಳಿದ್ರು. ಈಗಾಗಲೇ 10 ಜನರ ಪೈಕಿ 6 ಜನರಿಗೆ ಟಿಕೆಟ್ ಕೊಡಿಸಿದ್ರು. ಇನ್ನು 4 ಜನರಿಗೆ ಟಿಕೆಟ್ ಕೊಡಿಸ್ತೀನಿ ಅಂತ ಹೇಳಲಾಗಿತ್ತು. ಬಿಜೆಪಿಯ ಟಿಕೆಟ್ ಯಾರಿಗಾದ್ರೂ ಬೇಕು ಅಂದ್ರೆ ನನಗೆ ಹೇಳಿ ಟಿಕೆಟ್ ಕೊಡಿಸ್ತೀನಿ ಅಂದಿದ್ರು.
2022ರಲ್ಲಿ ಪ್ರಸಾದ್ ಬೈಂದೂರು ಮೂಲಕ ನನಗೆ ಗೋವಿಂದ ಬಾಬು ಪೂಜಾರಿ ಸಂಪರ್ಕ ಆಯ್ತು. ಗೋವಿಂದಬಾಬು ಪೂಜಾರಿ ಬೈಂದೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ರು. ಗೋವಿಂದ ಬಾಬು ಪೂಜಾರಿ ಅವರಿಗೆ ಮೋಸ ಮಾಡೋದಕ್ಕಾಗಿ ಗಗನ್ ಜೊತೆ ಸೇರಿಕೊಂಡೆ. ಕೇಂದ್ರದ ನಾಯಕರು ಅಂತ ಪರಿಚಯ ಮಾಡೋದಕ್ಕೆ ರಮೇಶ್, ಧನರಾಜ್ ತೀರ್ಮಾನ ಮಾಡಿದ್ವಿ. ಧನರಾಜ್ ಮತ್ತು ರಮೇಶ್‍ಗೆ ಮೂರು ಗಂಟೆಗಳ ಕಾಲ ರಿಹರ್ಸಲ್ ಮಾಡಿಸಿದ್ವಿ. 2022ರ ಜುಲೈ 4ರಂದು ಗಗನ್ (Gagan), ಗೋವಿಂದ ಬಾಬು ಪೂಜಾರಿಯನ್ನು ಚಿಕ್ಕಮಗಳೂರಿನ ಅತಿಥಿ ಗೃಹಕ್ಕೆ ಕರೆಸಿಕೊಂಡು ಧನರಾಜ್ ಮತ್ತು ರಮೇಶ್ ಇಬ್ಬರನ್ನು ಪಿಎಂ ಮತ್ತು ಗೃಹಸಚಿವಾಲಯದ ನಿಕಟವರ್ತಿಗಳು ಅಂತ ಪರಿಚಯ ಮಾಡಿಕೊಟ್ವಿ. ಗಗನ್ ಆ ಸಂದರ್ಭದಲ್ಲಿ 50 ಲಕ್ಷಕ್ಕೆ ಬೇಡಿಕೆ ಇಟ್ಟರು.
ಗೋವಿಂದಬಾಬು ಪೂಜಾರಿ ಏಕಾಏಕಿ ಹಣ ನೀಡಲು ಒಪ್ಪಿಕೊಂಡ್ರು. ಇದ್ರಿಂದ ಖುಷಿಯಾಗಿ ನಾವು ಮುಂದಿನ ಡೀಲ್‍ಗೆ ಇಳಿದ್ವಿ. ಹೈಕಮಾಂಡ್ ನಾಯಕರು ಅಂತ ಹೇಳಿದ್ದ ಧನರಾಜ್ ಮತ್ತು ರಮೇಶ್‍ಗೆ 2 ಲಕ್ಷ ಹಣ ಕೊಟ್ವಿ. ಶಿವಮೊಗ್ಗದ ಆರ್‍ಎಸ್‍ಎಸ್ ಕಚೇರಿಯ ಬಳಿ ಮತ್ತೆ ಕರೆಸಿ 3 ಕೋಟಿ ಕೇಳಿದ್ವಿ. 3 ಕೋಟಿಯನ್ನು ಪ್ರಸಾದ್ ಬೈಂದೂರು ಮೂಲಕ ಮಂಗಳೂರಿಗೆ ಹಣ ತರಿಸಿಕೊಳ್ಳಲಾಯ್ತು. ಗೋವಿಂದ ಬಾಬು ನೀಡಿದ್ದ 50 ಲಕ್ಷದಲ್ಲಿ 12 ಲಕ್ಷ ಗಗನ್ ಕಡೂರಿಗೆ ನೀಡಲಾಗಿತ್ತು. ಚೆನ್ನನಾಯ್ಕ್‍ನನ್ನು ಬಳಸಿಕೊಂಡು ವಿಶ್ವನಾಥ್ ಜೀ ಹೆಸರನ್ನು ಹೇಳಿ ಮೋಸ ಮಾಡಲಾಗಿತ್ತು ಎಂದು ಸಿಸಿಬಿ ಮುಂದೆ ಚೈತ್ರಾ ತಪ್ಪೊಪ್ಪಿಕೊಂಡಿದ್ದಾರೆ.
5 ಕೋಟಿ ಲೆಕ್ಕ ಕೊಟ್ಟ ಚೈತ್ರಾ..!
ಚೈತ್ರಾ & ಶ್ರೀಕಾಂತ್‍ಗೆ – 3 ಕೋಟಿ 2 ಲಕ್ಷ ರೂ.
ಅಭಿನವ ಹಾಲಶ್ರೀಗೆ – 1.5 ಕೋಟಿ ರೂ.
ಗಗನ್ ಕಡೂರ್ ಗೆ – 39 ಲಕ್ಷ ರೂ.
ರಮೇಶ್‍ಗೆ – 2 ಲಕ್ಷ ರೂ.
ಧನರಾಜ್‍ಗೆ – 2 ಲಕ್ಷ ರೂ. ಚೆನ್ನನಾಯ್ಕ್ ಗೆ – 1 ಲಕ್ಷ ರೂ.