ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉತ್ತರಕಾಶಿ ಸುರಂಗ ಕುಸಿದು 5 ದಿನವಾದ್ರೂ ಕಾರ್ಮಿಕರ ರಕ್ಷಣೆ ಸಾಧ್ಯವಾಗಿಲ್ಲ, ಆಹಾರ, ಔಷಧಗಳ ಪೂರೈಕೆ

ಉತ್ತರಕಾಶಿ(Uttarkashi)ಯಲ್ಲಿ ಸುರಂಗ ಮಾರ್ಗ ಕುಸಿದು 40 ಕಾರ್ಮಿಕರು ಅವಶೇಷಗಳ ಹಿಂಬದಿ ಸಿಲುಕಿಕೊಂಡಿದ್ದಾರೆ, 96 ಗಂಟೆಗಳು ಕಳೆದರೂ ಅವರ ರಕ್ಷಣೆ ಇನ್ನೂ ಸಾಧ್ಯವಾಗಿಲ್ಲ. ಕಾರ್ಮಿಕರಿಗೆ ಆಹಾರ, ಔಷಧಗಳ ಪೂರೈಕೆ ಮಾಡಲಾಗುತ್ತಿದೆ. ಬುಧವಾರ ಭೂಕುಸಿತ ಉಂಟಾದ ಹಿನ್ನೆಲೆ ರಕ್ಷಣಾ ಕಾರ್ಯ ವಿಳಂಬವಾಗಿದೆ. ಕಾರ್ಮಿಕರು ಹಾಗೂ ಅವರ ಕುಟುಂಬದವರು ಸುರಂಗದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ನವೆಂಬರ್ 12 ರಂದು ಸುರಂಗ ಮಾರ್ಗ ಕುಸಿದಿತ್ತು, ಸಿಕ್ಕಿಬಿದ್ದ ಕಾರ್ಮಿಕರಿಗೆ ಆಹಾರ ಮತ್ತು ಔಷಧಗಳ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಅಧಿಕಾರಿಗಳು ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಸಿಕ್ಕಿಬಿದ್ದಿರುವ ಕಾರ್ಮಿಕರಿಗೆ ಪಾರು ಮಾರ್ಗವನ್ನು ಸಿದ್ಧಪಡಿಸಲು ಅವಶೇಷಗಳನ್ನು ಕೊರೆಯಲು ನಿಯೋಜಿಸಲಾದ ಯಂತ್ರಗಳು ಮಂಗಳವಾರ ಸಂಜೆ ಕೆಲಸ ಮಾಡದಿದ್ದಾಗ ಪರ್ಯಾಯ ಯೋಜನೆ ಇಲ್ಲದಿರುವ ಬಗ್ಗೆ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದರು. ಕೊರೆಯುವ ಕಾರ್ಯಾಚರಣೆಯನ್ನು ಪುನರಾರಂಭಿಸಲು ದೆಹಲಿಯಿಂದ ಬದಲಿ ಯಂತ್ರದ ಆಗಮನವನ್ನು ನಿರೀಕ್ಷಿಸಲಾಗುತ್ತಿದೆ.

ಬ್ರಹ್ಮಾಖಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವಿನ ನಿರ್ಮಾಣ ಹಂತದ ಸುರಂಗದ ಒಂದು ಭಾಗವು ಕುಸಿದಿದೆ. 15 ಜಾರ್ಖಂಡ್, ಎಂಟು ಉತ್ತರ ಪ್ರದೇಶ, ಐದು ಒಡಿಶಾ, 4 ಬಿಹಾರ, 4 ಪಶ್ಚಿಮ ಬಂಗಾಳ, 3 ಉತ್ತರಾಖಂಡ ಮತ್ತು ಅಸ್ಸಾಂನಿಂದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶದ ಒಬ್ಬರಿದ್ದಾರೆ.

No Comments

Leave A Comment