Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

ಉಡುಪಿ: ಬಿಜೆಪಿ ಹಿರಿಯ ಕಾರ್ಯಕರ್ತ ಕರಾಮತ್ ಆಲಿ ನಿಧನ

ಉಡುಪಿ:ನ,15: ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯರವರ ನಿಕಟವರ್ತಿ, ಕುಂಜಿಬೆಟ್ಟು ಕಟ್ಟೆ ಆಚಾರ್ಯ ಮಾರ್ಗ ನಿವಾಸಿ ಕರಾಮತ್ ಆಲಿ ನಿಧನರಾಗಿದ್ದಾರೆ.

ಪಕ್ಷದ ಅಲ್ಪಸಂಖ್ಯಾತ ಮೋರ್ಚಾದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಅಲ್ಪಸಂಖ್ಯಾತ ಸಮುದಾಯವನ್ನು ಬಿಜೆಪಿ ಜೊತೆ ಜೋಡಿಸುವ ಜೊತೆಗೆ ಸರಕಾರದ ವಿವಿಧ ಸೌಲಭ್ಯಗಳನ್ನು ಸಮುದಾಯಕ್ಕೆ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಿರುವ ಕರಾಮತ್ ಆಲಿ ಯವರ ನಿಧನದಿಂದ ಪಕ್ಷ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡರೊಬ್ಬರನ್ನು ಕಳೆದುಕೊಂಡಿದೆ.

No Comments

Leave A Comment