Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಗಂಗೊಳ್ಳಿ: ಘೋರ ಅಗ್ನಿ ದುರಂತ – ಹಲವು ಮೀನುಗಾರಿಕ ಬೋಟ್ ಬೆಂಕಿ ಗಾಹುತಿ- ಕೋಟ್ಯಾಂತರ ರೂ. ನಷ್ಟ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಗಂಗೊಳ್ಳಿಯ ಮ್ಯಾಗನೀಸ್ ರಸ್ತೆಯಲ್ಲಿ ಹತ್ತು ಮೀನುಗಾರಿಕ ಬೋಟಿಗೆ ಬೆಂಕಿ ತಗುಲಿದ್ದು ಸುಟ್ಟು ಕರಕಲಾಗಿದೆ‌ ಎಂದು ಮಾಹಿತಿ‌ ತಿಳಿದು ಬಂದಿದೆ.

ಈ ದುರ್ಘಟನೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ. ಯಾವುದೇ ಸಾವು-ನೋವು ಉಂಟಾಗಿಲ್ಲ. ಅಗ್ನಿ ಶಾಮಕ ದಳ, ಸಾರ್ವಜನಿಕರು ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.

ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

No Comments

Leave A Comment