ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಐಸ್‌ಲ್ಯಾಂಡ್ ನಲ್ಲಿ 14 ಗಂಟೆಗಳಲ್ಲಿ 800 ಬಾರಿ ಭೂಕಂಪನ: ತುರ್ತು ಪರಿಸ್ಥಿತಿ ಘೋಷಣೆ
ರೇಕ್ಯಾವಿಕ್: ದೇಶದ ನೈರುತ್ಯ ಭಾಗದಲ್ಲಿರುವ ರೇಕ್ಯಾನೆಸ್ ಪರ್ಯಾಯ ದ್ವೀಪದಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿದ ಬಳಿಕ ಐಸ್‌ಲ್ಯಾಂಡ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಜ್ವಾಲಾಮುಖಿ ಸ್ಫೋಟಕ್ಕೆ ಪೂರ್ವಭಾವಿಯಾಗಿ ಈ ಭೂಕಂಪನಗಳು ಸಂಭವಿಸಿರುವ ಸಾಧ್ಯತೆಯಿದೆ.
ಕಳೆದ 14 ಗಂಟೆಗಳಲ್ಲಿ ಸುಮಾರು 800 ಬಾರಿ ಭೂಮಿ ಕಂಪಿಸಿದ್ದರಿಂದ ಐಸ್‍ಲ್ಯಾಂಡ್‍ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈಗ ಸಂಭವಿಸಿರುವುದಕ್ಕಿಂತ ಹೆಚ್ಚು ಪ್ರಬಲ ಭೂಕಂಪನಗಳು ಉಂಟಾಗಬಹುದು ಮತ್ತು ಸರಣಿ ಭೂಕಂಪನಗಳು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಅಡಳಿತವು ಎಚ್ಚರಿಕೆ ನೀಡಿದೆ.
ಶುಕ್ರವಾರ ನಸುಕಿನ ಜಾವ 2 ಗಂಟೆಗೆ ಸರಣಿ ಭೂಕಂಪಗಳಾಗಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಇದು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು. ಇದು ಮುಂದುವರೆದರೆ ಹಲವಾರು ಸಮಸ್ಯೆಗಳು ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ ಅಂತ್ಯದಿಂದ ಇಲ್ಲಿಯವರೆಗೂ ದ್ವೀಪದಲ್ಲಿ ಸುಮಾರು 24,000 ಭೂಕಂಪಗಳು ದಾಖಲಾಗಿವೆ.
ಐಸ್‍ಲ್ಯಾಂಡ್‍ನ ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಬ್ಲೂ ಲಗೂನ್ ಜಿಯೋಥರ್ಮಲ್ ಸ್ಪಾ ಜ್ವಾಲಾಮುಖಿ ಸಾಧ್ಯತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೇ ಜನರ ರಕ್ಷಣೆ ಸಲುವಾಗಿ ಭೂಕಂಪನ ಸ್ಥಳಗಳಲ್ಲಿ ಸೇನಾ ಹಡಗುಗಳು ಕಾರ್ಯ ನಿರ್ವಹಿಸುತ್ತಿವೆ.
ಪ್ರವಾಸಿ ತಾಣಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ನಿರಾಶ್ರಿತರ ತಾಣಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಪರ್ಯಾಯ ದ್ವೀಪದಲ್ಲಿಯ,ಸುಮಾರು 4,000 ಜನರು ವಾಸವಾಗಿರುವ ಗ್ರಿಂಡ್‌ವಿಕ್ ಸರಣಿ ಭೂಕಂಪನಗಳು ದಾಖಲಾದ ಪ್ರದೇಶದಿಂದ ಸುಮಾರು ಮೂರು ಕಿ.ಮೀ.ಅಂತರದಲ್ಲಿದೆ. ಜ್ವಾಲಾಮುಖಿ ಸ್ಫೋಟಗೊಂಡರೆ ಜನರನ್ನು ತೆರವುಗೊಳಿಸಲು ಯೋಜನೆಯನ್ನು ಆಡಳಿತವು ರೂಪಿಸಿದೆ.
ಸರಣಿ ಭೂಕಂಪನಗಳ ಪೈಕಿ ಅತ್ಯಂತ ಪ್ರಬಲ ಭೂಕಂಪನ 5.2ರಷ್ಟು ತೀವ್ರತೆಯನ್ನು ಹೊಂದಿದ್ದು,ಗ್ರಿಂಡ್‌ವಿಕ್ ಗ್ರಾಮದ ಉತ್ತರದಲ್ಲಿ ಸಂಭವಿಸಿತ್ತು. ಗ್ರಿಂಡ್‌ವಿಕ್‌ಗೆ ತೆರಳುವ ರಸ್ತೆಗೆ ಹಾನಿಯಾಗಿರುವುದರಿಂದ ಅದನ್ನು ಮುಚ್ಚಲಾಗಿದೆ. ಐಎಂಒ ಪ್ರಕಾರ ಅಕ್ಟೋಬರ್ ಕೊನೆಯ ವಾರದಿಂದ ಪರ್ಯಾಯ ದ್ವೀಪದಲ್ಲಿ ಸುಮಾರು 24,000 ಕಂಪನಗಳು ದಾಖಲಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದ ಅಪರಾಹ್ನ ಎರಡು ಗಂಟೆಯ ನಡುವೆ 800 ಭೂಕಂಪನಗಳು ಸಂಭವಿಸಿವೆ. ಸುಮಾರು ಐದು ಕಿ.ಮೀ.ಆಳದಲ್ಲಿ ಶಿಲಾಪಾಕವು ಸಂಗ್ರಹಗೊಂಡಿದೆ. ಅದು ಮೇಲ್ಮೈನತ್ತ ಚಲಿಸಲು ಆರಂಭಿಸಿದರೆ ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಎಎಂಒ ಹೇಳಿದೆ.