ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಇನ್ನಿಲ್ಲ

ಉಡುಪಿ:ನ.10: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಾಯಘಾತದಿಂದ ನಿನ್ನೆ (ನ.9ರಂದು) ರಾತ್ರಿ ನಿಧನರಾದರು.

ಗುರವಾರ ಬೆಳಿಗ್ಗೆ ಉಡುಪಿಯ ಮನೆಯಲ್ಲಿದ್ದಾಗ ಧಿಢೀರಾಗಿ ಎದೆನೋವು ಕಾಣಿಸಿಕೊಂಡಿದ್ದು ಅವರನ್ನ ನಗರದ ಅಸ್ಪತ್ರೆಗೆ ತೋರಿಸಿದಾಗ ಹೃದಯಾಘಾತ ಅಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಅಸ್ಪತ್ರೆಗೆ ಅಂಬುಲ್ಯಾನ್ಸ್ ನಲ್ಲಿ ಕರೆದೋಯ್ಯುತ್ತಿದ್ದಾಗ ದಾರಿ ಮದ್ಯೆ ಹೆಮ್ಮಣ್ಣ ತೀವ್ರ ಅಸ್ವಸ್ಥ ಗೊಂಡಿದ್ದರು. ಮಣಿಪಾಲ ಅಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

1991 ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್ – “ಕ್ಷಿತಿಜ” ಎನ್ನುವ ಸ್ವಂತ ವಾರ ಪತ್ರಿಕೆ ಅರಂಭಿಸಿ , ಮುಖ್ಯ ಸಂಪಾದಕರಾಗಿದ್ದರು.ಬಳಿಕ ಈ ಟಿವಿ ಕನ್ನಡ ,ಡಿಡಿ ನ್ಯೂಸ್ ನಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಲೇಖನಗಳನ್ನು ಬರೆದು ,ಸರಕಾರದ ಗಮನ ಸೆಳೆಯುವಲ್ಲಿ ಪ್ದಮುಖ ಪಾತ್ರ ವಹಿಸಿದ್ದರು‌.

ಇತ್ತೀಚೆಗಷ್ಟೇ ಕನೆಕ್ಟ್ ಮಿಡಿಯಾ ಸಂಸ್ಥೆಯನ್ನು ಹುಟ್ಟುಹಾಕಿ ,ಹಲವು ಯೋಜನೆಗಳನ್ನು ರಾಜ್ಯದಾದ್ಯಂತ ಅರಂಭಿಸುವ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದರು. ಪರಿಸರ ಪ್ರೇಮಿಯೂ ,ಕೃಷಿ ಪ್ರೇಮಿಯೂ ಆಗಿದ್ದ ಇವರು ,ಕರಾವಳಿಯಲ್ಲಿ ಕಾಂಡ್ಲವನ ಯೋಜನೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮೃತರು ತಂದೆ ತಾಯಿ,ಪತ್ನಿ , ಪುತ್ರ , ನಾಲ್ಕು ಜನ ಸಹೋದರು ಹಾಗೂ ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಪತ್ರಕರ್ತರ ನಿಧನಕ್ಕೆ ಕರಾವಳಿಕಿರಣ ಡಾಟ್ ಕಾ೦ ಮತ್ತು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ ನಾಡಿನ ಗಣ್ಯರು ಕಂಬನಿ‌ ಮಿಡಿದಿದ್ದಾರೆ.

No Comments

Leave A Comment