ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಸಿರಿಯಾದಲ್ಲಿ ಇರಾನ್ ನೆಲೆಗಳ ಮೇಲೆ ಅಮೇರಿಕಾ ವೈಮಾನಿಕ ದಾಳಿ – 9 ಮಂದಿ ಸಾವು
ಡಮಾಸ್ಕಸ್:ನ.9: ಅಮೇರಿಕಾದ ವಿರುದ್ಧದ ದಾಳಿಗೆ ಪ್ರತಿಯಾಗಿ ಪೂರ್ವ ಸಿರಿಯಾದಲ್ಲಿ ಇರಾನ್‌ಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಸಂಗ್ರಹಣಾ ಘಟಕದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
ಸಿರಿಯಾದಲ್ಲಿ ಒಂದು ಸ್ಥಳವನ್ನು ಗುರಿಯಾಗಿಸಿ ನಡೆಸಿದ ಎರಡನೇ ದಾಳಿ ಇದಾಗಿದ್ದು, ಕಳೆದ ತಿಂಗಳು, ಈ ಗುಂಪುಗಳು ಸಿರಿಯಾದಲ್ಲಿ ಅಮೆರಿಕದ ಸೈನಿಕರು ಮತ್ತು ಸೇನಾ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.
ಇನ್ನು ಯುಎಸ್ ಮಿಲಿಟರಿ ಪಡೆಗಳು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮತ್ತು ಅಂಗಸಂಸ್ಥೆ ಗುಂಪುಗಳು ಬಳಸುತ್ತಿದ್ದ ಪೂರ್ವ ಸಿರಿಯಾದ ಸೌಲಭ್ಯದ ಮೇಲೆ ಸ್ವಯಂ-ರಕ್ಷಣಾ ದಾಳಿಯನ್ನು ನಡೆಸಿತು. ಈ ದಾಳಿಯನ್ನು ಎರಡು ಯುಎಸ್ ಎಫ್ -15 ಗಳು ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯದ ವಿರುದ್ಧ ನಡೆಸಿತು ಎಂದು ಆಸ್ಟಿನ್ ತಿಳಿಸಿದ್ದಾರೆ.