ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಲ್ಯಾಣಪುರ ಶ್ರೀ ದೇವಳದ ಜೀರ್ಣೋದ್ಧಾರದ ಶಿಲಾ ಕೆತ್ತನೆಯ ಸಾಮಗ್ರಿ ಶ್ರೀಕ್ಷೇತ್ರಕ್ಕೆ

ಕಲ್ಯಾಣಪುರ:ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ ಶ್ರೀ ದೇವಳದ ಜೀರ್ಣೋದ್ಧಾರದ ಶಿಲಾ ಕೆತ್ತನೆಯ ಕಾರ್ಯವು ಈಗಾಗಲೇ ಆರಂಭವಾಗಿದ್ದು ಅಂದಾಜು 65 ಪ್ರತಿಶತ ಕೆಲಸ ಪೂರ್ಣಗೊಂಡಿದೆ.

08/11/2023 ನೇ ಬುಧವಾರದಂದು ಶ್ರೀ ದೇವರ ಗರ್ಭಗುಡಿಗೆ ಸಂಬಂಧ ಪಟ್ಟ ಶಿಲಾ ಕೆತ್ತನೆಯ ಸಾಮಗ್ರಿಗಳನ್ನು ಹೊತ್ತ ಮೊದಲನೆಯ ಟ್ರಕ್ ಶ್ರೀ ದೇವಳಕ್ಕೆ ಆಗಮಿಸಿದ್ದು ಈ ಶಿಲಾ ಕೆತ್ತನೆಯ ಸಾಮಗ್ರಿಯನ್ನು ಹೊತ್ತ ವಾಹನವನ್ನು ಸಂತೆಕಟ್ಟೆಯ ಶ್ರೀ ವೀರಭದ್ರ ದೇವಸ್ಥಾನದ ಬಳಿ ಸಮಾಜ ಬಾ೦ಧವರು ಅದ್ದೂರಿಯಾಗಿ ಸ್ವಾಗತಸಿ ತದ ನ೦ತರ ಅಲ್ಲಿಂದ ಭವ್ಯ ಮೆರವಣಿಗೆಯಲ್ಲಿ ಮೂಲಕ ಶ್ರೀ ದೇವಸ್ಥಾನದ ತನಕ ತರಲಾಯಿತು.

ನ೦ತರ ಪೂಜಾ ವಿಧಿ ವಿಧಾನದೊ೦ದಿಗೆ ಪೂಜೆಯನ್ನು ನೆರವೇರಿಸಲಾಯಿತು.

ದೇವಸ್ಥಾನದ ಅರ್ಚಕರಾದ ಕೆ.ಗಣಪತಿ ಭಟ್,ಜಯದೇವ್ ಭಟ್, ಆಡಳಿತ ಮೊಕ್ತೇಸರರಾದ ಅನ೦ತಪದ್ಮನಾಭ ಕಿಣಿ, ಆಡಳಿತ ಮ೦ಡಳಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರುಗಳು ಸೇರಿದ೦ತೆ ಅಪಾರ ಮ೦ದಿ ಸಮಾಜ ಬಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

kiniudupi@rediffmail.com

No Comments

Leave A Comment