ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ನಗರಕ್ಕೆ ವಾರಾಹಿ ನೀರು ನೀಡುವ ಬಗ್ಗೆ ಉಡುಪಿ ಶಾಸಕರ ಹೇಳಿಕೆ ಹಾಸ್ಯಸ್ಪದ ಹಾಗೂ ಅಗ್ಗದ ಪ್ರಚಾರ-ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಮ೦ಗಳವಾರದ೦ದು (ನಿನ್ನೆ) ಉಡುಪಿ ನಗರಸಭೆಯಲ್ಲಿ ವಾರಹಿ ನೀರು ಫೆಬ್ರವರಿ ತಿಂಗಳಲ್ಲಿ ಉಡುಪಿಯ ನಗರದ ಜನತೆಗೆ ನೀಡುತ್ತೇವೆ ಎಂದು ಉಡುಪಿ ಶಾಸಕರ ಹೇಳಿಕೆ ಕೇವಲ ಪ್ರಚಾರಕ್ಕಾಗಿ ಹೇಳಿದ ಹೇಳಿಕೆಯಂತೆ ತೋರುತ್ತಿದೆ ವಾರಾಹಿ ನದಿ ನೀರಿನ ಜೋಡಣೆಯು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಆಗದಿದ್ದು ಈ ಬಗ್ಗೆ ಉಡುಪಿ ಶಾಸಕರು ಹಾಗೂ ಉಡುಪಿ ಜಿಲ್ಲಾಧಿಕಾರಿಯವರು ನಗರಸಭೆಯ ಕಮಿಷನ್ ರವರು ಕೂಡಲೇ ಗಮನ ಹರಿಸಿ ಈ ಜೋಡಣೆ ಕೆಲಸವನ್ನು ಪ್ರಪ್ರಥಮವಾಗಿ ಮಾಡಿಸಿದ ನಂತರ ಅದು ಸರಿಯಾಗಿದೆ ಎಂದು ತಿಳಿದು ನಮ್ಮ ಹೇಳಿಕೆಯನ್ನು ನೀಡಿ.

ನಮ್ಮ ಶಿರಿಬೀಡು ವರ್ಡ್ ನ ವ್ಯಾಪ್ತಿಯಲ್ಲಿ ಈ ನೀರಿನ ಜೋಡಣೆ ಕೆಲಸ ಸಮರ್ಪಕವಾಗಿ ಆಗಲಿಲ್ಲ ಇದಕ್ಕೆ ಹೊಣೆ ಯಾರು ಸ್ಥಳೀಯ ನಾಗರಿಕರು ಈ ಬಗ್ಗೆ ಪ್ರಶ್ನಿಸಿದರೆ ರಸ್ತೆಯನ್ನು ಅಗೆದು ಕೊಡಿ ನಂತರ ನಿಮಗೆ ನಲ್ಲಿ ನೀರಿನ ಜೋಡಣೆಯನ್ನು ಮಾಡುತ್ತೇವೆ ಎಂದು ಉಡಾಫೆಯ ಉತ್ತರವನ್ನು ಈ ಕಾಮಗಾರಿ ನಡೆಸುತ್ತಿರುವ ಕಾಂಟ್ರಾಕ್ಟ್ದಾರರು ಹೇಳುತ್ತಿದ್ದಾರೆ.

ಜನಸಾಮಾನ್ಯರನ್ನು ಬೆದರಿಸುತ್ತಿದ್ದಾರೆ ಈ ಬಗ್ಗೆ ಶಾಸಕರು ಉತ್ತರಿಸಬೇಕಾಗಿದೆ ಜನಸಾಮಾನ್ಯರಿಗೆ ರಸ್ತೆಯನ್ನು ಅಗೆಯಲು ಸಾಧ್ಯವೇ? ರಸ್ತೆಯನ್ನು ಅಗೆದು ಕೊಟ್ಟರೆ ಮಾತ್ರ ನಮಗೆ ಈ ನೀರಿನ ಸೌಭಾಗ್ಯವೇ ಎಂದು ಉಡುಪಿಯ ಜನತೆಗೆ ಸರಿಯಾಗಿ ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿಸಿ ನಂತರದ ದಿನಗಳಲ್ಲಿ ಹೇಳಿಕೆಯನ್ನು ನೀಡಿ ನಿಮ್ಮ ಅಗ್ಗದ ಪ್ರಚಾರದ ಅವಶ್ಯಕತೆ ಉಡುಪಿಯ ಜನತೆಗೆ ಇಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.ಮಾತ್ರವಲ್ಲದೇ ಅಧಿಕಾರಿಗಳನ್ನು ಬೆದರಿಸುವುದನ್ನು ನಿಲ್ಲಿಸಲಿ ಎ೦ದು ಅವರು ಹೇಳಿದ್ದಾರೆ.

kiniudupi@rediffmail.com

No Comments

Leave A Comment