ಉಡುಪಿ ಪರ್ಯಾಯ ಅತಿಥಿಗಳಿಗೆ ವಸತಿ ಸ್ವೀಕಾರಕ್ಕೆ ಉಡುಪಿ ನಿವಾಸಿಗಳಿಗೆ ಮನವಿ
ಉಡುಪಿ:ಜನವರಿ 2024ರಲ್ಲಿ ನಡೆಯುವ ಉಡುಪಿ ಶ್ರೀ ಪುತ್ತಿಗೆ ಪರ್ಯಾಯ ಉತ್ಸವದ ಸಂದರ್ಭದಲ್ಲಿ ಜನವರಿ 14 ರಿಂದ 19 ರವರೆಗೆ ಉಡುಪಿಗೆ ಬರುವ ಶ್ರೀಕೃಷ್ಣ ಭಕ್ತರಿಗೆ ತಮ್ಮ ಮನೆಗಳಲ್ಲಿ ಅತಿಥಿಗಳಾಗಿ ಸ್ವೀಕರಿಸಲು ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿಯು ಉಡುಪಿ ನಿವಾಸಿಗಳಲ್ಲಿ ಮನವಿ ಮಾಡಿದೆ.
ಡಿಸೆಂಬರ್ 10ರೊಳಗೆ ಉಡುಪಿ ನಿವಾಸಿಗಳು ತಮ್ಮ ಮನೆಯಲ್ಲಿ ಅಥವಾ ಖಾಲಿ ಇರುವ ವಸತಿಗಳ ನೀಡುವಿಕೆ ಬಗ್ಗೆ ಉಡುಪಿ ಠಥಬೀದಿ ಶ್ರೀ ಪುತ್ತಿಗೆ ಮಠದ ಪರ್ಯಾಯ ಸ್ವಾಗತ ಸಮಿತಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಡಿಸೆಂಬರ್ 25 ರ ಒಳಗೆ ಉಡುಪಿಗೆ ಬರುವ ಯಾತ್ರಾರ್ಥಿಗಳ ಪಟ್ಟಿಯನ್ನು ಸ್ವಾಗತ ಸಮಿತಿಯಿಂದ ಪಡೆದು ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ರಘುಪತಿ ಭಟ್ ಹಾಗೂ ಮಠದ ದೀವಾನರಾದ ನಾಗರಾಜ ಆಚಾರ್ಯ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .
ತಾ.07/11/23 ರಂದು ನಡೆದ ಸ್ವಾಗತ ಸಮಿತಿಯ ಮುಖ್ಯಸ್ಥ ರ ಸಭೆಯಲ್ಲಿ ಈ ವಿಚಾರವನ್ನು ನಿರ್ಧರಿಸಿ ,ಪರ್ಯಾಯದ ಮೆರವಣಿಗೆ,ಹೊರೆಕಾಣಿಕೆ,ವಿದ್ಯುದೀಪಾಲಂಕಾರ,ಸಾಂಸ್ಕೃತಿಕ ಕಾರ್ಯಕ್ರಮ,ಊಟೋಪಚಾರ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.ಹೆಚ್ಚಿನ ವಿಚಾರಗಳಿಗೆ ಸ್ವಾಗತ ಸಮಿತಿಯ 7676215242 ಮೊಬೈಲ್ ನಂಬರನ್ನು ಸಂಪರ್ಕಿಸಬಹುದು.