ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಚಿಕ್ಕಬಳ್ಳಾಪುರ:2ಬೈಕ್ ಗಳು ಡಿಕ್ಕಿಯಾಗಿ ಲಾರಿಯಡಿ ಬಿದ್ದು ಬೈಕ್ ಸವಾರ ಸಾವು, ಲಾರಿಗೆ ಬೆಂಕಿ

ಚಿಕ್ಕಬಳ್ಳಾಪುರ: ಎರಡು ಬೈಕ್ ಗಳು ಡಿಕ್ಕಿಯಾಗಿ ಲಾರಿಯಡಿ ಸಿಲುಕಿದ ಪರಿಣಾಮ ಓರ್ವ ಸವಾರ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44 ರ ಹಾರೋಬಂಡೆ ಬಳಿ ಸೋಮವಾರ ನಡೆದಿದೆ. ಅಪಘಾತದ ಪರಿಣಾಮ ಸಿಮೆಂಟ್ ತುಂಬಿದ್ದ ಲಾರಿಗೆ ಬೆಂಕಿ ಹತ್ತಿದೆ.

ಮೃತರನ್ನು ಶಿಡ್ಲಘಟ್ಟ ತಾಲೂಕಿನ ಮಿತ್ತನಹಳ್ಳಿ ಗ್ರಾಮದ ನಾಗರಾಜು (40) ಎಂದು ಗುರುತಿಸಲಾಗಿದೆ.

ಹೆದ್ದಾರಿಯಲ್ಲಿ ಎರಡು ಬೈಕ್ ಸವಾರರು ಮಾತನಾಡಿಕೊಂಡು ಹೋಗುತ್ತಿದ್ದ ವೇಳೆ ಬೈಕ್ ಗಳು ಒಂದಕ್ಕೊಂದು ತಾಗಿ ರಸ್ತೆಗೆ ಬಿದ್ದಿವೆ.

ಒಂದು ಬೈಕ್ ಹಿಂದುಗಡೆಯಿಂದ ಬರುತ್ತಿದ್ದ ಲಾರಿ ಕೆಳಗಡೆ ಸಿಲುಕಿದೆ. ಕೂಡಲೇ ಲಾರಿಗೆ ಬೆಂಕಿ ಹತ್ತಿಕೊಂಡಿದೆ. ಮತ್ತೊಂದು ಬೈಕ್ ರಸ್ತೆ ಬದಿಗೆ ಬಿದ್ದಿತ್ತು. ಲಾರಿ ಕೆಳಗೆ ಬಿದ್ದ ಬೈಕ್ ಸವಾರ ನಾಗರಾಜಯ ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ನಾಗರಾಜು ಮೃತಪಟ್ಟಿದ್ದಾರೆ.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.

No Comments

Leave A Comment