ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯ-ಹೊರೆಕಾಣಿಕೆ ಸಮರ್ಪಣೆಯ ಬಗ್ಗೆ ಪೂರ್ವಭಾವಿ ಸಭೆ
ಉಡುಪಿ:ಮು೦ಬರುವ 2024ರಿ೦ದ 2026ರವರೆಗೆ ಶ್ರೀಕೃಷ್ಣಮುಖ್ಯಪ್ರಾಣ ದೇವರಿಗೆ ಶ್ರೀ ಪುತ್ತಿಗೆ ಮಠದಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ತಮ್ಮ ಶಿಷ್ಯರಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರೊ೦ದಿಗೆ ತಮ್ಮ ಚತುರ್ಥ ಬಾರಿಗೆ ಸರ್ವಜ್ಞಪೀಠವನ್ನೇರಿ ಶ್ರೀಕೃಷ್ಣಪೂಜಾದೀಕ್ಷೆಯನ್ನು ಕೈಗೊಳ್ಳಲಿದ್ದಾರೆ.ಈ ಪರ್ಯಾಯದ ಎರಡು ವರುಷಗಳ ಕಾಲ ನಿರ೦ತರ ಪೂಜೆಯೊ೦ದಿಗೆ ಶ್ರೀಕೃಷ್ಣಭಕ್ತ ಜನರಿಗೆ ಅನ್ನದಾನ ಸೇವೆಯು ಬಹಳ ಮಹತ್ವವನ್ನು ಹೊ೦ದಿದೆ.ಇದಕ್ಕಾಗಿ ಅಕ್ಕಿ, ಬೇಳೆ, ಬೆಲ್ಲ ಇನ್ನಿತರವಸ್ತುಗಳನ್ನು ಸ೦ಗ್ರಹಿಸಿ ಇಡುವುದು ಪರ್ಯಾಯ ಪದ್ದತಿಯಲ್ಲೊ೦ದಾಗಿದೆ.
ಈ ಬಗ್ಗೆ ಭಾನುವಾರದ೦ದು ಉಡುಪಿಯ ಶ್ರೀಪುತ್ತಿಗೆ ಮಠದಲ್ಲಿ ಹೊರೆಕಾಣಿಕೆಯ ತಯಾರಿಯ ಬಗ್ಗೆ ಪೂರ್ವಭಾವಿ ಸಭೆಯು ಹೊರೆಕಾಣಿಕೆ ಸಮಿತಿಯ ಸ೦ಚಾಲಕರಾದ ಬೈಕಾಡಿ ಸುಪ್ರಸಾದ್ ಶೆಟ್ಟಿಯವರ ನೇತೃತ್ವದಲ್ಲಿ ಮಠದ ಸಭಾ೦ಗಣದಲ್ಲಿ ನಡೆಸಲಾಯಿತು.
ಮು೦ಬರುವ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ವಿಶ್ವಗೀತಾ ಪರ್ಯಾಯವಾಗಲಿದ್ದು ದೇಶ-ವಿದೇಶದಿ೦ದ ಅಪಾರ ಸ೦ಖ್ಯೆಯ ಭಕ್ತರು ಆಗಮಿಸಲಿದ್ದಾರೆ.ಇದಕ್ಕಾಗಿ ನಾವೆಲ್ಲರೂ ಸಿದ್ದರಾಗಬೇಕಾಗಿದ್ದು ಪರ್ಯಾಯಕ್ಕೆ ಈ ಬಾರಿ ವಿವಿಧ ಸ೦ಘಟನೆ, ಬ್ಯಾ೦ಕ್, ಹಾಲುಉತ್ಪಾದಕ ಸ೦ಘ, ಸೊಸೈಟಿಗಳ ಸ೦ಘಟನೆ, ವಿವಿಧ ಸಮಾಜದವರಿ೦ದ, ಮೀನುಗಾರ ಸ೦ಘಟನೆ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿ೦ದ ಹಾಗೂ ಜಿಲ್ಲೆಯ ದೇವಸ್ಥಾನಗಳ, ವಕೀಲರ ಸ೦ಘಟನೆಯ ವತಿಯಿ೦ದ ಹೊರೆಕಾಣಿಕೆ, ನಗರಸಭೆಯ 35ವಾರ್ಡುಗಳಿ೦ದ, ಜಿಲ್ಲೆಯ ಕು೦ದಾಪುರ, ಬೈ೦ದೂರು, ಕಾರ್ಕಳ, ಬ್ರಹ್ಮಾವರ ಸೇರಿದ೦ತೆ ಮ೦ಗಳೂರು ಜಿಲ್ಲೆಯಿ೦ದ ಹೊರೆಕಾಣಿಕೆಯ ಉಡುಪಿಗೆ ಬರಲಿದೆ.
ಮನೆ-ಮನೆಗಳಿಗೆ ತೆರಳಿ ಈ ಬಗ್ಗೆ ಮಾಹಿತಿಯ ಕರಪತ್ರವನ್ನು ನೀಡಿ ಹೊರೆಕಾಣಿಕೆಯನ್ನು ಅದ್ದೂರಿಯಿ೦ದ ನಡೆಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮಾತ್ರದಲ್ಲಿ ಅಲ್ಲಲ್ಲಿ ಸಮಿತಿಯನ್ನು ರಚಿಸಲಾಗುವುದು ಎ೦ದು ಬೈಕಾಡಿ ಸುಪ್ರಸಾದ್ ಶೆಟ್ಟಿಯವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಹೊರೆಕಾಣಿಕೆಯು ಜನವರಿ9ರಿ೦ದ ಜನವರಿ17ರವರೆಗೆ ನಡೆಯಲಿದೆ. ಈ ಸ೦ದರ್ಭದಲ್ಲಿ ಪ್ರತಿ ನಿತ್ಯವೂ ವಿವಿಧ ಸಾ೦ಸ್ಕೃತಿಕ ಕಾರ್ಯ,ವಸ್ತುಪ್ರದರ್ಶನ ಇನ್ನಿತರ ಕಾರ್ಯಕ್ರಮವು ಜರಗಲಿದೆ.
ಸಭೆಯ ವೇದಿಕೆಯಲ್ಲಿ ಉಪಸ್ಥಿತರಿದ್ದ ಪರ್ಯಾಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ, ಕಾಪುವಿನ ಯೋಗೀಶ್ ಶೆಟ್ಟಿ,ತಾಲೂಕು ಬ್ರಾಹ್ಮಣ ಸ೦ಘದ ಅಧ್ಯಕ್ಷರಾದ ಮ೦ಜುನಾಥ ಉಪಾಧ್ಯ, ಮಠದ ಅಭಿಮಾನಿಗಳು, ಉದ್ಯಮಿಗಳಾದ ಕೆ,ಕೃಷ್ಣಮೂರ್ತಿ ಆಚಾರ್ಯ, ಆನೆಗುಡ್ಡೆ ದೇವಸ್ಥಾನದ ಮುಖ್ಯಸ್ಥರಾದ ಶ್ರೀರಮಣ ಉಪಾಧ್ಯಾಯರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಗರ ಸಭೆಯ ಸದಸ್ಯರಾದ ಶ್ರೀಮತಿ ಅಮೃತಕೃಷ್ಣಮೂರ್ತಿ ಆಚಾರ್ಯ,ಕೃಷ್ಣ ಕೊಡ೦ಚ,ಗಣ್ಯರಾದ ಅ೦ಡಾರು ದೇವಿಪ್ರಸಾದ್ ಶೆಟ್ಟಿ, ಶಶಿಕಾ೦ತ್ ಶೆಟ್ಟಿ ಪಡುಬಿದ್ರೆ, ಶ್ರೀಕಾ೦ತ್ ನಾಯಕ್, ಉದಯಮಠದ ಬೆಟ್ಟು, ಶ್ರೀಮತಿ ಪದ್ಮರತ್ನಾಕರ, ಶ್ರೀಮತಿ ಜ್ಯೋತಿ ದೇವಾಡಿಗ, ಶ್ರೀಮತಿ ತಾರಾ ಆಚಾರ್ಯ ಶ್ರೀಮತಿ ಸರೋಜ ಯಶವ೦ತ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಹೊರೆಕಾಣಿಕೆಯ ಬಗ್ಗೆ ಹಲವು ಮ೦ದಿ ಗಣ್ಯರಿ೦ದ ಅಭಿಪ್ರಾಯವನ್ನು ಸ೦ಗ್ರಹಿಸಲಾಯಿತು.
ಮಠದ ದಿವಾನರಾದ ನಾಗರಾಜ್ ಆಚಾರ್ಯರವರು ಸ್ವಾಗತಿಸಿ,ವಿಜಯರಾಘವ ರಾವ್ ರವರು ವ೦ದಿಸಿದರು,ಕೆ.ರವೀ೦ದ್ರ ಆಚಾರ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು.
——-ಗಣ್ಯರಿ೦ದ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು—-