ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 140ಕ್ಕೆ ಏರಿಕೆ, ದೆಹಲಿಯಲ್ಲೂ ಕಂಪಿಸಿದ ಭೂಮಿ/140 killed after strong earthquake jolts Nepal
ಕಠ್ಮಂಡು: ಪ್ರಬಲ ಭೂಕಂಪಕ್ಕೆ ನೇಪಾಳ ರಾಷ್ಟ್ರ ನಲುಗಿ ಹೋಗಿದ್ದು, ಭೂಕಂಪದ ಪರಿಣಾಮ 140 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ನೂರಾರು ಮಂದಿ ಸಾವನ್ನಪ್ಪಿ, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಹಿಮಚ್ಛಾದಿತ ಪ್ರದೇಶವಾಗಿರುವ ನೇಪಾಳದ ಪಶ್ಚಿಮ ಗಡಿ ಭಾಗದಲ್ಲಿ ನೆಲಮಟ್ಟದಿಂದ ಭೂಮಿಯ ಒಳಗೆ ಸುಮಾರು 18 ಕಿ.ಮೀ. ದೂರದಲ್ಲಿ ಕಂಪನ ಕೇಂದ್ರ ಸ್ಥಾನವಿತ್ತು. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ಈ ಕಂಪನಗಳು ಹೊಂದಿದ್ದವು ಎಂದು ಅಮೆರಿಕದ ಜಿಯೋಲಜಿಕಲ್ ಸರ್ವೆ ಇಲಾಖೆ ತಿಳಿಸಿದೆ.
ಈ ನಡುವೆ ಕಂಪನದ ಕೇಂದ್ರ ಸ್ಥಾನದಿಂದ ಅಂದಾಜು 500 ಕಿ.ಮೀ. ದೂರವಿರುವ, ಭಾರತದ ರಾಜಧಾನಿ ದೆಹಲಿಯಲ್ಲೂ ಕಂಪನದ ಅನುಭವಗಳಾಗಿವೆ. ಆದರೆ, ಯಾವುದೇ ಕಟ್ಟಡ ಹಾನಿ ಅಥವಾ ಸಾವು ನೋವು ಸಂಭವಿಸಿಲ್ಲ. ದೆಹಲಿ – ರಾಷ್ಟ್ರ ರಾಜಧಾನಿ ಪ್ರಾಂತ್ಯ (ದೆಹಲಿ – ಎನ್ ಸಿಆರ್) ಹಾಗೂ ನೊಯ್ಡಾ ಮುಂತಾದ ಕಡೆಗಳಲ್ಲಿ ಕಂಪನದ ಅನುಭವ ಉಂಟಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ 11:47 ಕ್ಕೆ ಜಜರ್ಕೋಟ್ನ ರಾಮಿದಂಡಾದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಸಾವು- ನೋವಿನ ಬಗ್ಗೆ ಪ್ರಧಾನಿ ಪುಷ್ಪ ಕಮಲ್ ದಹಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕಾಗಿ ಎಲ್ಲಾ 3 ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ ಎಂದು ನೇಪಾಳ ಪಿಎಂಒ ಟ್ವೀಟ್ ಮಾಡಿದೆ. ನೇಪಾಳದಲ್ಲಿ ಭೂಕಂಪದಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ನೇಪಾಳದಲ್ಲಿ ಸಂಭವಿಸಿದ ಈ ಪ್ರಬಲ ಭೂಕಂಪದಿಂದಾಗಿ ಭಾರತದ ಜನರೂ ಭಯಭೀತರಾಗಿದ್ದಾರೆ. ರಾತ್ರಿ 11.32ರ ಸುಮಾರಿಗೆ ಭೂಕಂಪ ಸಂಭವಿಸಿದ್ದರಿಂದ ಜನರು ಮನೆಯಿಂದ ಹೊರ ಬರಬೇಕಾಯಿತು. ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ (ಎನ್‌ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದುವು ನೇಪಾಳದ ಅಯೋಧ್ಯೆಯ ಉತ್ತರಕ್ಕೆ 227 ಕಿಮೀ ಮತ್ತು ಕಠ್ಮಂಡುವಿನಿಂದ 331 ಕಿಮೀ ಪಶ್ಚಿಮ ವಾಯುವ್ಯದಲ್ಲಿ 10 ಕಿಮೀ ಆಳದಲ್ಲಿದೆ.
ನೇಪಾಳದಲ್ಲಿ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿಯ ಪಕ್ಕದಲ್ಲಿರುವ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದ್ದು, ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವ ಅನೇಕ ಜನರು ಹೊರಬಂದಿದ್ದಾರೆ.
ಉತ್ತರ ಪ್ರದೇಶದ ಲಕ್ನೋ, ಬಸ್ತಿ, ಬಾರಾಬಂಕಿ, ಫಿರೋಜಾಬಾದ್, ಅಮೇಥಿ, ಗೊಂಡಾ, ಪ್ರತಾಪಗಢ, ಭದೋಹಿ, ಬಹ್ರೈಚ್, ಗೋರಖ್‌ಪುರ ಮತ್ತು ಡಿಯೋರಿಯಾ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ, ಜೊತೆಗೆ ಬಿಹಾರದ ಕತಿಹಾರ್, ಮೋತಿಹಾರಿ ಮತ್ತು ಪಾಟ್ನಾದಲ್ಲೂ ಭೂಮಿ ನಡುಗಿದ ಅನುಭವವಾಗಿದೆ.
At least 140 people were killed and several others injured when a powerful 6.4 magnitude earthquake jolted Nepal just before midnight on Friday, destroying hundreds of houses in the Himalayan country’s remote mountainous region in the most devastating tremor since 2015.
According to the National Earthquake Monitoring and Research Centre, the earthquake with an epicentre in Jajarkot district, about 500km west of Kathmandu, was recorded at 11:47 pm.
It is the most devastating earthquake in the country since the 2015 earthquake that killed around 9,000 people in the country and injured more than 22,000 people.
The impact of the quake was felt in Kathmandu and surrounding districts, and even in New Delhi in neighbouring India.
The Nepal Army mobilised its personnel Friday soon after the earthquake to carry out rescue works at the incident site, according to Nepal Army spokesperson Krishna Prasad Bhandari.