ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಎಕ್ಸಲೆಂಟ್: ಮಳೆ ಎಫೆಕ್ಟ್.. ಬೆಂಗಳೂರಿನಲ್ಲಿ ತಗ್ಗಿದ ವಾಯು ಮಾಲಿನ್ಯ,19ರಲ್ಲಿ AQI: ಹವಾಮಾನ ಸಂಸ್ಥೆ Accu Weather

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆ ನಗರದ ವಾಯುಮಾಲಿನ್ಯ (Air pollution) ಮಟ್ಟವನ್ನು ಕೊಂಚ ಪ್ರಮಾಣದಲ್ಲಿ ತಗ್ಗಿಸಿದ್ದು, ಶನಿವಾರ ನಗರದಲ್ಲಿನ ವಾಯು ಗುಣಮಟ್ಟ (Air Quality Index) ಪ್ರಮಾಣ 19ಕ್ಕೆ ಇಳಿದಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ ವರದಿ ಮಾಡಿದೆ.

ವಾಯುಮಾಲಿನ್ಯ (Air Pollution)ದ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ (Delhi) ಹಾದಿಯಲ್ಲೇ ಕರ್ನಾಟಕ (Karnataka) ರಾಜಧಾನಿ ಬೆಂಗಳೂರು (Bengaluru) ದಾಪುಗಾಲಿರಿಸುತ್ತಿದ್ದು, ಸಿಲಿಕಾನ್ ಸಿಟಿಯ ಗಾಳಿಯ ಗುಣಮಟ್ಟ (Air Quality Index) ಕಳಪೆ ಮಟ್ಟಕ್ಕೆ ಕುಸಿಯುತ್ತಿರುವ ಕುರಿತು ಈ ಹಿಂದೆ ವರದಿಯಾಗಿತ್ತು. ಆದರೆ ಇದೀಗ ನಗರದಲ್ಲಿ ನಿನ್ನೆ ಸುರಿದ ಮಳೆ ನಗರಲ್ಲಿನ ಧೂಳಿನ ಕಣಗಳು ಗಾಳಿಯೊಂದಿಗೆ ಸೇರುವುದನ್ನು ತಡೆದಿದೆ. ಪರಿಣಾಮ ಶನಿವಾರ ನಗರದಲ್ಲಿನ ವಾಯು ಗುಣಮಟ್ಟ ಪ್ರಮಾಣ 19ಕ್ಕೆ ಇಳಿದಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ (Accu Weather) ವರದಿ ಮಾಡಿದೆ.

ಬೆಂಗಳೂರಿನ  (Bengaluru) ಇಂದಿನ ಗಾಳಿಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದ್ದು, ಇಂದಿನ ವಾಯು ಗುಣಮಟ್ಟ PM 2.6 (Fine Particulate Matter) 19 ಆಗಿದ್ದು, PM 10 (Particulate Matter)ನ ಪ್ರಮಾಣ 14ರಷ್ಟಿದೆ. ಈ ಎರಡೂ ಅಂಶಗಳ ಪ್ರಮಾಣ ಎಕ್ಸೆಲೆಂಟ್ (ಉತ್ತಮ) ಎಂದು ಆ್ಯಕ್ಯುವೆದರ್ (Accu Weather) ವರದಿ ಮಾಡಿದೆ.

ಉಳಿದಂತೆ ನಗರದಲ್ಲಿನ ಗಾಳಿಯಲ್ಲಿನ ಎನ್ಒ2 (NO2-Nitrogen Dioxide) ಪ್ರಮಾಣ 15ರಷ್ಟಿದ್ದು, ಇದು ಉತ್ತಮ ಪ್ರಮಾಣದಲ್ಲಿದೆ. ಅಂತೆಯೇ ಓಜೋನ್ (O3-Ozone)ದ ಪ್ರಮಾಣ 4ರಷ್ಟಿದ್ದು, ಕಾರ್ಬನ್ ಮಾನಾಕ್ಸೈಡ್ (CO-Carbon Monoxide) 1ರಷ್ಟಿದ್ದು, S02 ಪ್ರಮಾಣ 2ರಷ್ಟಿದೆ.

ಸಾಮಾನ್ಯವಾಗಿ ಈ So2 ಅಂದರೆ ಸಲ್ಫರ್ ಡೈಆಕ್ಸೈಡ್‌ಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದರಿಂದ ಗಂಟಲು ಮತ್ತು ಕಣ್ಣಿನ ಕಿರಿಕಿರಿಗೆ ಗುರಿಯಾಗಬಹುದು. ಇದು ಆಸ್ತಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್ ಅನ್ನು ಉಲ್ಬಣಗೊಳಿಸಬಹುದು ಎಂದು ಹೇಳಲಾಗಿದೆ. ಆದರೆ ಇಂದು ನಗರದಲ್ಲಿ ಈ ಎರಡೂ ಅಂಶಗಳ ಪ್ರಮಾಣ ಉತ್ತಮವಾಗಿದೆ ಎಂದು ಆ್ಯಕ್ಯು ವೆದರ್ ವರದಿ ಮಾಡಿದೆ.

kiniudupi@rediffmail.com

No Comments

Leave A Comment