Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

‘ಕೃಷ್ಣಾನುಗ್ರಹವಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ’: ನಟಿ ಕಂಗನಾ ರಣಾವತ್

ದೇವಭೂಮಿ ದ್ವಾರಕಾ: ಕೃಷ್ಣಾನುಗ್ರಹವಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಶುಕ್ರವಾರ ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ.

ಇಂದು ಬೆಳಗ್ಗೆ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, “ಶ್ರೀ ಕೃಷ್ಣ ಕಿ ಕೃಪಾ ರಹೀ ತೊ ಲಡೆಂಗೆ (ಶ್ರೀಕೃಷ್ಣ ಆಶೀರ್ವಾದ ಮಾಡಿದ ಹೋರಾಡುತ್ತೇನೆ)” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮುದ್ರದಡಿಯಲ್ಲಿ ಮುಳುಗಿರುವ  ದ್ವಾರಕಾ ನಗರದ ಅವಶೇಷಗಳನ್ನು ನೋಡಲು ಯಾತ್ರಾರ್ಥಿಗಳಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು. ದ್ವಾರಕಾ ದಿವ್ಯ ನಗರಿ ಎಂದು ಯಾವಾಗಲು ಹೇಳುತ್ತೇನೆ. ಇಲ್ಲಿ ಎಲ್ಲವೂ ಅದ್ಭುತವಾಗಿದೆ. ದ್ವಾರಕಾಧೀಶ ಪ್ರತಿ ಕಣದಲ್ಲಿಯೂ ಇದ್ದಾನೆ, ದೇವರ ದರ್ಶನ ಪಡೆಯಲು ಇಲ್ಲಿಗೆ ಬರಲು ಪ್ರಯತ್ನಿಸುತ್ತೇನೆ. ಕೆಲಸದಿಂದ ಸ್ವಲ್ಪ ಸಮಯ ಸಿಕ್ಕಾಗಲೆಲ್ಲಾ ಇಲ್ಲಿಗೆ ಬರುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

“ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರ ಮೇಲಿನಿಂದ ಕೂಡ ಗೋಚರಿಸುತ್ತದೆ, ನೀರಿನೊಳಗೆ ಹೋಗಿ ಅವಶೇಷಗಳನ್ನು ನೋಡಬಹುದಾದಂತಹ ಸೌಲಭ್ಯವನ್ನು ಸರ್ಕಾರ ನೀಡಬೇಕೆಂದು  ಬಯಸುತ್ತೇನೆ. ನನಗೆ ಕೃಷ್ಣ ನಗರವು ಸ್ವರ್ಗದಂತೆ” ಎಂದು ಅವರು ಹೇಳಿದರು. ತಮ್ಮ ಮುಂಬರುವ “ಎಮರ್ಜೆನ್ಸಿ”  ಮತ್ತು ತನು ವೆಡ್ಸ್ ಮನು ಭಾಗ 3″ ಚಿತ್ರದ ಬಗ್ಗೆಯೂ ರಣಾವತ್ ಮಾತನಾಡಿದರು.

No Comments

Leave A Comment