ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಜ್ರದ ಉಂಗುರವಿದ್ದ ಬ್ಯಾಗ್ ನಾಪತ್ತೆ
ಬೆಂಗಳೂರು: ನವೆಂಬರ್ : 03: ಪ್ರೈಮ್ ಟಿವಿ ನ್ಯೂಸ್ : ಮಹಿಳೆಯೊಬ್ಬರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಶೌಚಾಲಯಕ್ಕೆ ಹೋಗುವ ಮುನ್ನ ಹೊರಗಿಟ್ಟಿದ್ದ ವಜ್ರದ ಉಂಗುರ, ಕಿವಿಯೋಲೆ ಹಾಗೂ ಒಂದು ಲಕ್ಷ ರೂ. ಹಣವಿದ್ದ ಬ್ಯಾಗ್ ನಾಪತ್ತೆಯಾಗಿರುವುದು ವರದಿಯಾಗಿದೆ.
ಟರ್ಮಿನಲ್-1ರ ನಿರ್ಗಮನ ಗೇಟ್ ನಂಬರ್-1 ಸಮೀಪದ ಶೌಚಾಲಯದ ಬಳಿ ಈ ಬ್ಯಾಗ್ ನಾಪತ್ತೆಯಾಗಿದ್ದು, ಈ ಸಂಬಂಧ ಕೆಐಎಎಲ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ಅಕ್ಟೋಬರ್ 29ರಂದು ಬಸವೇಶ್ವರನಗರದ ನಿವಾಸಿ ಶಾಲು ಅಗರ್ವಾಲ್ ಎಂಬುವರು ನಗರದಿಂದ ಅಹಮದಾಬಾದ್‍ಗೆ ಪ್ರಯಾಣಿಸಬೇಕಿತ್ತು. ಬೆಳಗ್ಗೆ 7 ಗಂಟೆಗೆ ಏರ್ಪೋಟ್ ಗೆ ಬಂದಿದ್ದ ಅವರು ಸೆಕ್ಯೂರಿಟಿ ಚೆಕ್ ಇನ್ ಆದ ನಂತರ, ನಿರ್ಗಮನ ಗೇಟ್ ನಂಬರ್ 1ರ ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಬ್ಯಾಗ್ ಅನ್ನು ಶೌಚಾಲಯದ ಹೊರಗಡೆ ಇಟ್ಟು ಒಳಗೆ ಹೋಗಿದ್ದಾರೆ. ವಾಪಸ್ ಬಂದು ನೋಡಿದಾಗ ಬ್ಯಾಗ್ ಕಾಣೆಯಾಗಿತ್ತು. ಬ್ಯಾಗ್‍ನಲ್ಲಿದ್ದ ಒಂದು ವಜ್ರದ ಉಂಗುರ, ಒಂದು ಜೊತೆ ಕಿವಿಯೋಲೆ ಮತ್ತು 1 ಲಕ್ಷ ರೂಪಾಯಿ ಹಣ ಕಳುವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.