ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕುಂದಾಪುರ: ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಕುಂದಾಪುರ:ಅ 30.ವಾಣಿಜ್ಯ ತೆರಿಗೆ (Commercial Tax) ಅಧಿಕಾರಿಯ ಕುಂದಾಪುರದ ಮನೆ ಮೇಲೆ ಸೋಮವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆಸಿದೆ.
ಕುಂದಾಪುರದ ಎಲ್.ಐ.ಸಿ. ರಸ್ತೆಯಲ್ಲಿರುವ ವಾಣಿಜ್ಯ ತೆರಿಗೆ ಸಹಾಯಕ ಅಭಿಯಂತರ ಅಧಿಕಾರಿ ರಾಜೇಶ್ ಬೆಳಕೇರಿ ಎಂಬುವರ ಮನೆಗೆ ನಸುಕಿನಲ್ಲಿಯೇ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲದ ರಾಜೇಶ್ ಬೆಳ್ಕೆರೆಯವರಾಗಿತುವ ರಾಜೇಶ್ ಕುಂದಾಪುರದ ಎಲ್.ಐ.ಸಿ. ರಸ್ತೆಯ ವಡೇರಹೋಬಳ ಅಡ್ಡರಸ್ತೆಯಲ್ಲಿ ಜಾಗ ಖರೀದಿಸಿ ಬೃಹತ್ ಮನೆ ನಿರ್ಮಿಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಒಟ್ಟು ಎರಡು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅಂಕೋಲದ ಬೇಳ್ಕೆರೆಯಲ್ಲಿಯೂ ದಾಳಿ ನಡೆಸಿದ್ದಾರೆ. ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಕಚೇರಿ ಆರಂಭದ ತಕ್ಷಣ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಸುಮಾರು ಏಳು ಲೋಕಾಯುಕ್ತ ಅಧಿಕಾರಿಗಳ ತಂಡ ರಾಜೇಶ್ ಅವರ ಕುಂದಾಪುರದ ಮನೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪತ್ರಕರ್ತರು ರಾಜೇಶ್ ನಿವಾಸದ ಸಮೀಪ ಆಗಮಿಸುತ್ತಿದ್ದಂತೆ ಮನೆಯ ಹೊರಗಿನ ಗೇಟಿಗೆ ಬೀಗ ಜಡಿಯಲಾಗಿದೆ.