Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಹವಾಮಾನ ವರದಿ: ದಕ್ಷಿಣ ಭಾರತದಲ್ಲಿ ಮತ್ತೊಂದು ಸುತ್ತಿನ ಭಾರಿ ಮಳೆ ಸಾಧ್ಯತೆ, ರಾಜಧಾನಿ ದೆಹಲಿಗೆ ಮಂಜಿನ ಹೊದಿಕೆ

ನವದೆಹಲಿ: ದಕ್ಷಿಣ ಭಾರತವು ಮತ್ತೊಂದು ಸುತ್ತಿನ ಭಾರೀ ಮಳೆಯ ನಿರೀಕ್ಷೆಯಲ್ಲಿದ್ದು, ಅಕ್ಟೋಬರ್ 29-30 ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)  ಮಾಹಿತಿ ನೀಡಿದೆ.

ಈ ಮಳೆಯು ಈಗಾಗಲೇ ಅಕ್ಟೋಬರ್ 21 ರಂದು ಪ್ರಾರಂಭವಾದ ಈಶಾನ್ಯ ಮಾನ್ಸೂನ್‌ನ ಆರಂಭಕ್ಕೆ ಸಾಕ್ಷಿಯಾಗಿದ್ದು, ಹಾಲಿ ಬಿರು ಬಿಸಿಲಿನ ಶಾಖದಿಂದ ತತ್ತರಿಸುತ್ತಿರುವ ದಕ್ಷಿಣ ಭಾರತೀಯರಿಗೆ ಸ್ವಲ್ಪ ಪರಿಹಾರವನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ. IMD ಯ ಹವಾಮಾನ ಮುನ್ಸೂಚನೆಯು ಮುಂದಿನ ವಾರದಲ್ಲಿ ದಕ್ಷಿಣ ಭಾರತ ಮತ್ತು ವಾಯುವ್ಯ ಭಾರತದಲ್ಲಿ (ಉತ್ತರ ಪ್ರದೇಶವನ್ನು ಹೊರತುಪಡಿಸಿ) ಮಳೆಯ ಚಟುವಟಿಕೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸೂಚಿಸುತ್ತಿದೆ. ವ್ಯತಿರಿಕ್ತವಾಗಿ, ಈ ಅವಧಿಯಲ್ಲಿ ದೇಶದ ಉಳಿದ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಭಾರತದಲ್ಲಿ ಭಾರಿ ಮಳೆ
ಇನ್ನು ದಕ್ಷಿಣ ಭಾರತವು ಚಂಡಮಾರುತಗಳು, ಮಿಂಚುಗಳು ಮತ್ತು ಬಿರುಗಾಳಿ ಸಹಿತ ಸಾಕಷ್ಟು ವ್ಯಾಪಕವಾದ ಮಧ್ಯಮ ಮಳೆಯನ್ನು ನಿರೀಕ್ಷಿಸಬಹುದು. ಹವಾಮಾನ ಇಲಾಖೆಯ ಪ್ರಕಾರ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಾಹೆ ಸೇರಿದಂತೆ ದಕ್ಷಿಣ ಭಾರತದಲ್ಲಿ ಮುಂದಿನ ದಿನಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಅನೇಕ ಸ್ಥಳಗಳಲ್ಲಿ ಹಗುರವಾದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಪ್ರದೇಶಗಳು ಮತ್ತು ದಕ್ಷಿಣ ಆಂತರಿಕ ಕರ್ನಾಟಕದ ಪ್ರದೇಶಗಳು ಅಕ್ಟೋಬರ್ 29-30 ರಂದು ಮಳೆ ನಿರೀಕ್ಷಿಸಿಬಹುದಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಲ್, ದಕ್ಷಿಣ ಒಳನಾಡಿನ ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹವಾಮಾನ ಮಾದರಿಯು ಸಕ್ರಿಯ ಈಶಾನ್ಯ ಮಾನ್ಸೂನ್ ಅನ್ನು ಸೂಚಿಸುತ್ತದೆ. ಇದು ಪ್ರದೇಶಕ್ಕೆ ಹೆಚ್ಚು ಅಗತ್ಯವಿರುವ ತೇವಾಂಶವನ್ನು ತರುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ, ಮುಂದಿನ ವಾರ ಪೂರ್ತಿ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಅಕ್ಟೋಬರ್ 31 ರವರೆಗೆ ಮಂಜಿನ ಮುಸುಕು
ಇನ್ನು ಮೆಟ್ ಆಫೀಸ್ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ಟೋಬರ್ 31 ರವರೆಗೆ ಮಂಜು ಮುಸುಕಿದ ವಾತಾವರಣ ಮುಂದುವರೆಯಲಿದೆ. ಪ್ರಮುಖವಾಗಿ ಮುಂಜಾನೆ ಹೆಚ್ಚಿನ ಮಂಜು ಅನುಭವಿಸುವ ಸಾಧ್ಯತೆಯಿದೆ. ಗುರುವಾರ ದೆಹಲಿಯು 31.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ತಲುಪಿದ್ದು, ಅದರ ಗಾಳಿಯ ಗುಣಮಟ್ಟವು ಸತತ ನಾಲ್ಕನೇ ದಿನವೂ ‘ಕಳಪೆ’ ವಿಭಾಗದಲ್ಲಿ ಸಾಗಿದೆ. ಭಾರತದ ಹವಾಮಾನ ಇಲಾಖೆಯು ರಾಷ್ಟ್ರೀಯ ರಾಜಧಾನಿಯಲ್ಲಿ ಕನಿಷ್ಠ 15.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿದೆ ಎಂದು ವರದಿ ಮಾಡಿದೆ, ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿದೆ.

No Comments

Leave A Comment