Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ನಕಲಿ ಪರಶುರಾಮ ಮೂರ್ತಿಯ ಸೃಷ್ಟಿಕರ್ತರ ಹಾಗೂ ಸಹಕರಿಸಿದ ವ್ಯಕ್ತಿಗಳ ಬ೦ಧನಕ್ಕೆ ಸುರೇಶ್ ಶೆಟ್ಟಿ ಬನ್ನ್ನ೦ಜೆ ಒತ್ತಾಯ

ಉಡುಪಿ:ಕಾರ್ಕಳದ ನಕಲಿ ಪರಶುರಾಮ ಮೂರ್ತಿಯ ಸೃಷ್ಟಿಕರ್ತರಾದ ಶಾಸಕ ಸುನಿಲ್ ಕುಮಾರ್ ಹಾಗೂ ಶಾಮೀಲಾದ ಕದ ಇಲಾಖೆಯವರನ್ನು ಕೂಡಲೇ ಬಂಧಿಸಬೇಕೆ೦ದು ಉಡುಪಿ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಒತ್ತಾಯಿಸಿದ್ದಾರೆ.

ಈ ನಕಲಿ ಮೂರ್ತಿಯನ್ನು ಸೃಷ್ಟಿಸಿದ ಅವಳಿ ಮೋಸಗಾರರನ್ನು ಕೂಡಲೇ ಬಂಧಿಸಿ ನಮ್ಮ ರಾಜ್ಯದ ಜನರಿಗೆ ಸತ್ಯ ಸತ್ಯತೆಯನ್ನು ತಿಳಿಸಿ ಕೊಡಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದೆಲ್ಲವನ್ನು ಕಾಂಗ್ರೆಸಿಗರೇ ಮಾಡಿದ್ದು ಎಂದು ಸುಳ್ಳು ವಿಷಯಗಳು ಸೃಷ್ಟಿಸಿ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆಕೂರಿಸುವಂತ ರೂವಾರಿಗಳು ಇವರುಗಳು ಆದುದರಿಂದ ಈ ಬಿಜೆಪಿಯ ಶಾಸಕರ ಹಾಗೂ ಅದಕ್ಕೆ ಬೆಂಬಲಕ್ಕೆ ನಿಂತ ಅಧಿಕಾರಿಗಳ ಈ ಕೂಡಲೇ ಬಂದನವಾಗಬೇಕು ಬಿಜೆಪಿ ಶಾಸಕರ ಈ ಡೋಂಗಿತನ ಸನ್ಮಾನ್ಯ ಮೋದಿಯವರಿಗೂ ಕೂಡ ತಿಳಿಯಬೇಕು ಅನಗತ್ಯವಾಗಿದೆ.

ಕಾಂಗ್ರೆಸ್ ಪಕ್ಷದ ನಾಯಕರ ಮನೆಯ ಮೇಲೆ ಐಟಿ ಹಾಗೂ ಇಡಿ ರೈಡ್ ಮಾಡಿಸುತ್ತಿರುವ ಬಿಜೆಪಿಯ ಕೇಂದ್ರ ನಾಯಕರು ತಮ್ಮ ಪಕ್ಷದ ಶಾಸಕರುಗಳು ಹಾಗೂ ಅವರ ಬೆಂಬಲಕ್ಕೆ ನಿಂತ ಅಧಿಕಾರಿಗಳ ಮನೆಗಳಿಗೆ ದಾಳಿ ಮಾಡಿಸಿ ಅವರುಗಳು ಅಕ್ರಮವಾಗಿ ಗಳಿಸಿದಂತಹ ಸಂಪತ್ತನ್ನು ಪ್ರಪ್ರಥಮವಾಗಿ ಮುಟ್ಟುಗೋಲುಹಾಕಿಸಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment