ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಗಾಜಾ ಆಸ್ಪತ್ರೆ ಸ್ಫೋಟದ ನಂತರ ಇಸ್ರೇಲ್ ಗೆ ಬೈಡನ್ ಬೆಂಬಲ, ಹಮಾಸ್ ನ್ನು ಖಂಡಿಸಿದ ಅಮೇರಿಕ ಅಧ್ಯಕ್ಷ

ಟೆಲ್ ಅವಿವ್: ತನ್ನ ವಿರುದ್ಧ ದಾಳಿ ನಡೆಸಿದ ಹಮಾಸ್ ಉಗ್ರರ ವಿರುದ್ಧ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದು, ಅಮೇರಿಕಾ ಯಹೂದಿಗಳ ಬೆಂಬಲಕ್ಕೆ ನಿಂತಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಜೋ ಬೈಡನ್ ಇಸ್ರೇಲ್ ಭೇಟಿ ವೇಳೆ ಗಾಜಾ ಪಟ್ಟಿಯಲ್ಲಿ ಆಸ್ಪತ್ರೆಯೊಂದು ಸ್ಫೋಟಗೊಂಡಿದ್ದು, ಈ ಬೆನ್ನಲ್ಲೇ ಹೇಳಿಕೆ ನೀಡಿರುವ ಅಮೇರಿಕಾ ಅಧ್ಯಕ್ಷ, ಈ ಕೃತ್ಯ ನಡೆಸಿರುವುದು ಇಸ್ರೇಲಿ ಸೇನೆಯಲ್ಲ, ಆದರೆ ಮತ್ತೊಂದು ತಂಡದಿಂದ ಈ ಸ್ಫೋಟ ನಡೆದಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

ಹಮಾಸ್ ಆಡಳಿತದಲ್ಲಿನ ಗಾಜಾ ಆರೋಗ್ಯ ಸಚಿವರು, ಇಸ್ರೇಲ್ ನ ವೈಮಾನಿಕ ದಾಳಿಯಿಂದಾಗಿ ಆಸ್ಪತ್ರೆ ಸ್ಫೋಟಗೊಂಡಿದ್ದು, ನೂರಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಇಸ್ರೇಲಿ ಸೈನ್ಯ ತಳ್ಳಿಹಾಕಿದ್ದು,   ಮತ್ತೊಂದು ಉಗ್ರ ಸಂಘಟನೆಯಾದ ಇಸ್ಲಾಮಿಕ್ ಜಿಹಾದ್ ಪ್ಯಾಲೆಸ್ತೇನ್ ನಿಂದ ತಪ್ಪಾಗಿ ಹಾರಿಸಿದ ರಾಕೆಟ್ ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಿದೆ. ಆದರೆ ಆ ಸಂಘಟನೆ ಆರೋಪವನ್ನು ನಿರಾಕರಿಸಿದೆ.

ಇಸ್ರೇಲ್ ನಲ್ಲಿದ್ದ ಜೋ ಬೈಡನ್ ಮುಂದೆ ಜೋರ್ಡಾನ್ ಗೆ ಭೇಟಿ ನೀಡಲಿದ್ದಾರೆ. ಆದರೆ ಆಸ್ಪತ್ರೆ ಸ್ಫೋಟ ಘಟನೆಯ ಬಳಿಕ ಬೈಡನ್ ಅರಬ್ ನಾಯಕರೊಂದಿಗಿನ ಸಭೆಯನ್ನು ರದ್ದುಗೊಳಿಸಿದ್ದಾರೆ. ಈ ಸ್ಫೋಟ ಪ್ರಕರಣದಿಂದ ನೆತನ್ಯಾಹು ತೀವ್ರ ದುಃಖ ಮತ್ತು ಆಕ್ರೋಶಗೊಂಡಿದ್ದಾರೆ. ಅ.7 ರ ದಾಳಿಯಲ್ಲಿ ಹಮಾಸ್ ಇಸ್ರೇಲಿಗಳ ನರಮೇಧ ಮಾಡಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗುವುದಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

No Comments

Leave A Comment