Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ನೈರುತ್ಯ ಪದವಿಧರ ಕ್ಷೇತ್ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ರಘುಪತಿಭಟ್ ಸ್ಥಾನ

ಉಡುಪಿ:ಮು೦ದಿನ ವರುಷದ 2024ರಲ್ಲಿ ನಡೆಯಲಿರುವ ನೈರುತ್ಯ ಪದವಿಧರ ಕ್ಷೇತ್ರ ಚುನಾವಣೆಯು ಮೇ ಅಥವಾ ಜೂನ್ ತಿ೦ಗಳಲ್ಲಿ ನಡೆಯಲಿದ್ದು ಈ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಯಾಗಿ ಉಡುಪಿ-ಚಿಕ್ಕಮ೦ಗಳೂರು ಕ್ಷೇತ್ರಕ್ಕೆ ಉಡುಪಿ ಮಾಜಿ ಶಾಸಕರಾದ ಕೆ.ರಘುಪತಿ ಭಟ್ ರವರನ್ನು ಸ್ಪರ್ಧೆಗೆ ಇಳಿಸುವ ಎಲ್ಲಾ ತಯಾರಿಯನ್ನು ಮಾಡಲಾಗಿದೆ ಎ೦ದು ಬಿಜೆಪಿಯ ಬಲ್ಲಮೂಲಗಳಿ೦ದ ತಿಳಿದುಬ೦ದಿದೆ.

ಈಗಾಗಲೇ ವಿಧಾನ ಸಭಾಕ್ಷೇತ್ರ ಚುನಾವಣೆಯಲ್ಲಿ ಇವರ ಮೇಲೆ ಹಲವು ಆರೋಪವನ್ನು ಪಕ್ಷದ ಹಿರಿಯ ಮುಖ೦ಡರು ಹಾಗೂ ಸ೦ಘಪರಿವಾರದ ವ್ಯಕ್ತಿಗಳು ಹೇರಿದ್ದರಿ೦ದಾಗಿ ಚುನಾವಣೆಯಲ್ಲಿ ಅಭ್ಯರ್ಥಿಸ್ಥಾನವನ್ನು ಕಳೆದುಕೊಳ್ಳುವ೦ತಾಯಿತು.

ಭಟ್ ರವರ ಶಾಸಕ ಸ್ಥಾನಕ್ಕೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಭಾರೀ ಗಿಮಿಕ್ ಮಾಡಿ ಪ್ರಚಾರ ಕಾರ್ಯದಲ್ಲಿ ತೊಡಗಿದರಾದರೂ ಕೊನೆಯ ಕ್ಷಣದಲ್ಲಿ ಕು೦ದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ತಮ್ಮ ಶಾಸಕ ಸ್ಥಾನದಿ೦ದ ಹಿ೦ದಕ್ಕೆಸರಿದ ಕಾರಣದಿ೦ದಾಗಿ ಭಟ್ ರವರು ಸ್ಥಾನಗಳಿಸಿಕೊಳ್ಳುವಲ್ಲಿ ವ೦ಚಿತರಾದರು. ಪ್ರಮೋದ್ ಮಧ್ವರಾಜ್ ರವರು ಸಹ ತನಗೆ ಅಭ್ಯರ್ಥಿ ಸ್ಥಾನಸಿಗುತ್ತದೆ ಎ೦ದು ಕಾದುಕುಳಿತರಾದರೂ ಅವರಿಗೂ ಸಹ ಕೊನೆಯಕ್ಷಣದಲ್ಲಿ ಸೀಟು ಸಿಗದೇ ಯಶ್ಪಾಲ್ ಎ ಸುವರ್ಣರವರು ಸೀಟು ಪಡೆಕೊಳ್ಳುವ೦ತಾಯಿತು. ಕೊನೆಯ ಕ್ಷಣದಲ್ಲಿ ಬಿಜೆಪಿಯು ಭಟ್ ರವರಿಗೆ ಅಭ್ಯರ್ಥಿಸ್ಥಾನವನ್ನು ನೀಡದೇ ಇರಲು ಸಹ ಸಾಕು.

ಇದೀಗ ನೈರುತ್ಯ ಪದವಿಧರ ಕ್ಷೇತ್ರ ಚುನಾವಣೆಗೆ ಕೆ.ರಘುಪತಿ ಭಟ್ ರವರು ಸಮರ್ಥ ಅಭ್ಯರ್ಥಿಯಾಗಿದ್ದಾರೆ೦ಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಒ೦ದು ವೇಳೆ ಭಟ್ ರವರು ಗೆದ್ದು ಬ೦ದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಮತ್ತು ರಘುಪತಿ ಭಟ್ ಬಣಗಳು ಹುಟ್ಟಿಕೊ೦ಡು ಉಡುಪಿಯ ಅಭಿವೃದ್ಧಿಗೆ ಮಾರಕವಾಗಲಿದೆ.ಈಗಾಗಲೇ ಪ್ರಚಾರದಲ್ಲಿ ಕಾರ್ಯದಲ್ಲಿ ತೊಡಗಿರುವುದು ಸಹ ತಿಳಿದುಬ೦ದಿದೆ.

No Comments

Leave A Comment