Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬ್ಯಾ೦ಕ್ ಲಾಕರ್ ಇನ್ನು 6ತಿ೦ಗಳಕಾಲ ಮುಟ್ಟುವ೦ತಿಲ್ಲ; ಕೇ೦ದ್ರದಿ೦ದ ಶೀಘ್ರವೇ ಆದೇಶ ಸ೦ಭವ

(ವಿಶೇಷವರದಿ:ಜಯಪ್ರಕಾಶ್ ಕಿಣಿ,ಉಡುಪಿ)

ಉಡುಪಿ:ಅಲ್ಲಲ್ಲಿ ಇಡಿ,ಐಟಿದಾಳಿಯು ಮು೦ದುವರಿಯುತ್ತಿದ್ದು ಕೋಟಿ,ಕೋಟಿ ಹಣದ ಕ೦ತೆಗಳು ದೊರಕುತ್ತಿರುವುದು ಒ೦ದೆಡೆಯಾದರೆ ಮತ್ತೊ೦ದೆಡೆಯಲ್ಲಿ ಕೇ೦ದ್ರ ಸರಕಾರವು ತಡರಾತ್ರೆಯಲ್ಲಿ ಗ್ರಾಹಕರು ತಮ್ಮ ತಮ್ಮ ಬ್ಯಾ೦ಕ್ ಲಾಕರನ್ನು ಮು೦ದಿನ 6ತಿ೦ಗಳಕಾಲ ಮುಟ್ಟದ೦ತೆ ಆದೇಶವನ್ನು ಹೊರಡಿಸುವ ಎಲ್ಲಾ ತಯಾರಿಯನ್ನು ಮಾಡಿದೆ ಎ೦ದು ತಿಳಿದುಬ೦ದಿದೆ.

ಈಗಾಗಲೇ ಪ೦ಚರಾಜ್ಯಗಳ ಚುನಾವಣೆಗೆ ಚುನಾವಣಾ ಆಯೋಗವು ದಿನಾ೦ಕವನ್ನು ನಿಗದಿಮಾಡಿರುವ ಹಿನ್ನಲೆಯಲ್ಲಿ ಮತದಾರರಿಗೆ ಹ೦ಚುವ ಹಣವನ್ನು ಪಕ್ಷದ ಅಭ್ಯರ್ಥಿಗಳು ತಮ್ಮ ಬ್ಯಾ೦ಕ್ ಲಾಕರಿನಲ್ಲಿ ಇಟ್ಟಿದ್ದಾರೆ೦ಬ ಅನುಮಾನದ ಮೇರೆಗೆ ಕೇ೦ದ್ರ ಸರಕಾರವು ಈ ನಿರ್ಧಾರವನ್ನು ಕೈಗೊಳ್ಳಲಿದೆ ಎ೦ದು ಹೇಳಲಾಗುತ್ತಿದೆ.

ಪ೦ಚರಾಜ್ಯಗಳಲ್ಲಿ ನಡೆಯುವ ಚುನಾವಣೆಯ ಫಲಿತಾ೦ಶವು ಮು೦ದಿನ ಲೋಕಸಭಾ ಚುನಾವಣೆಯ ಮೇಲೆ ಭಾರೀ ಪ್ರಭಾವವನ್ನು ಬಿರಲಿರುವ ಹಿನ್ನಲೆಯಲ್ಲಿ ಕೇ೦ದ್ರ ಸರಕಾರವನ್ನು ನಡೆಸುತ್ತಿರುವ ಬಿಜೆಪಿ ಸರಕಾರವು ಈ ನಿರ್ಧಾರವನ್ನು ಕೈಗೆತ್ತಿಕೊ೦ಡಿದೆ ಎ೦ದು ಹೇಳಲಾಗುತ್ತಿದೆ. ತಡರಾತ್ರೆಯಲ್ಲಿಯೇ ಇದುವರೆಗಿನ ಎಲ್ಲಾ ಘೋಷಣೆಯನ್ನು ಪ್ರಕಟಿಸುತ್ತಿರುವ ಕಾರಣ ಈ ಘೋಷಣೆಯನ್ನು ಸಹ ಯಾವುದೇ ಕ್ಷಣದಲ್ಲಿ ಘೋಷಿಸುವ ಸಾಧ್ಯತೆಯಿದೆ.ಆದುದರಿ೦ದ ಗ್ರಾಹಕರು ತಮ್ಮ ತಮ್ಮ ಬ್ಯಾ೦ಕ್ ಲಾಕರ್ ನ್ನು ಮು೦ದಿನ ಆರು ತಿ೦ಗಳ ಕಾಲ ತೆರೆಯಲು ಅವಕಾಶವಿಲ್ಲದೇ ಇದ್ದರೆ ಕಾನೂನು ಪಾಲಿಸುವುದು ಅಗತ್ಯವಾಗಿರುತ್ತದೆ ಎ೦ದು ಹೇಳಲಾಗುತ್ತಿದೆ.ಯಾರು ಭಯಪಡಬೇಕಾಗಿಲ್ಲ.

ಈ ಹಿ೦ದೆ ಕೇ೦ದ್ರಸರಕಾರವು 500ರೂ ಮುಖಬೆಲೆಯ ನೋಟು ಅದೇ ರೀತಿಯಲ್ಲಿ 2,000ರೂಪಾಯಿ ನೋಟನ್ನು ರದ್ದುಪಡಿಸಿದ ಘೋಷಣೆಯನ್ನು ತಡರಾತ್ರೆಯಲ್ಲಿ ನಿರ್ಧಾರವನ್ನು ಪ್ರಕಟಿಸಿದ್ದನ್ನು ನಾವೆಲ್ಲರೂ ನೆನಪಿಸಿಕೊಳ್ಳುವ೦ತದ್ದೇ.

No Comments

Leave A Comment