ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಸಲಿಂಗ ವಿವಾಹ ಕಾನೂನು ತರುವ ಜವಾಬ್ದಾರಿ ಸಂಸತ್ತಿನದ್ದು, ನ್ಯಾಯಾಲಯ ಕೇವಲ ವ್ಯಾಖ್ಯಾನಿಸಬಹುದು: ಸಿಜೆಐ ಚಂದ್ರಚೂಡ್
ನವದೆಹಲಿ: ವಿಶೇಷ ವಿವಾಹ ಕಾಯಿದೆ(Special Marriage Act)ಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಅದನ್ನು ವ್ಯಾಖ್ಯಾನಿಸಬಹುದು, ಅದನ್ನು ಬದಲಾಯಿಸುವುದು ಸಂಸತ್ತು ಅಂದರೆ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ಅವರು ಇಂದು ಸಲಿಂಗ ವಿವಾಹವನ್ನು(Same Sex Marriage Verdict) ಕಾನೂನುಬದ್ಧಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ 21 ಮನವಿಗಳ ವಿಚಾರಣೆ ಕೈಗೆತ್ತಿಕೊಂಡು ತೀರ್ಪು ನೀಡುವ ಸಂದರ್ಭದಲ್ಲಿ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ನೇತೃತ್ವದ ಪಂಚಸದಸ್ಯ ಪೀಠ ಮಹತ್ವದ ತೀರ್ಪು ನೀಡಿದ್ದಾರೆ.
ಸಮಾಜದಲ್ಲಿ ಎಲ್ ಜಿಬಿಟಿ ಸಮುದಾಯ ವಿರುದ್ಧ ತಾರತಮ್ಯ ಮಾಡದಂತೆ ನೋಡಿಕೊಳ್ಳಲು ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (UTs) ನಿರ್ದೇಶನ ನೀಡಿದ ಮುಖ್ಯ ನ್ಯಾಯಮೂರ್ತಿಗಳು, queer(LGBT) ಸಲಿಂಗ, ದ್ವಿಲಿಂಗಿಗಳು, ತೃತೀಯ ಲಿಂಗಗಳು ಒಂದು ಸಹಜ ವಿದ್ಯಮಾನವಾಗಿದ್ದು ಹಲವು ವಿರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ನಗರ ಪ್ರದೇಶಗಳಲ್ಲಿ ಮತ್ತು ಶ್ರೀಮಂತ ಹಾಗೂ ಗಣ್ಯ ವ್ಯಕ್ತಿಗಳಲ್ಲಿ ಮಾತ್ರ ಕಂಡುಬರುವ ವಿದ್ಯಮಾನವಲ್ಲ ಎಂದರು.
ಜಸ್ಟಿಸ್ ಕೌಲ್ ಅವರು ಸಲಿಂಗ ದಂಪತಿಗಳಿಗೆ ಕೆಲವು ಹಕ್ಕುಗಳನ್ನು ನೀಡುವ ಬಗ್ಗೆ ಸಿಜೆಐ ಅವರ ಮಾತುಗಳಿಗೆ ದನಿಗೂಡಿಸಿದರು. “ವಿಭಿನ್ನ ಲಿಂಗೇತರ ಮತ್ತು ಭಿನ್ನಲಿಂಗೀಯ ಒಕ್ಕೂಟಗಳನ್ನು ಒಂದೇ ನಾಣ್ಯದ ಎರಡು ಮುಖಗಳಾಗಿ ನೋಡಬೇಕು” ಎಂದು ಅವರು ಹೇಳಿದರು, ಸಲಿಂಗಿಗಳ ಒಕ್ಕೂಟಗಳಿಗೆ ಕಾನೂನು ಮಾನ್ಯತೆ ವಿವಾಹ ಸಮಾನತೆಯತ್ತ ಹೆಜ್ಜೆಯಾಗಿದೆ ಎಂದರು.
ತಮ್ಮ ತೀರ್ಪಿನ ಆಪರೇಟಿವ್ ಭಾಗವನ್ನು ಓದಿದ ನ್ಯಾಯಮೂರ್ತಿ ಭಟ್, ಕೆಲವು ಅಂಶಗಳಲ್ಲಿ ಸಿಜೆಐ ಅವರ ಅಭಿಪ್ರಾಯಗಳನ್ನು ಒಪ್ಪಿದರೆ ಇನ್ನು ಕೆಲವು ವಿಷಯಗಳನ್ನು ಒಪ್ಪಲಿಲ್ಲ. ನಿರ್ಣಾಯಕ ವಿಷಯದ ಕುರಿತು ತೀರ್ಪು ನೀಡಿದ ಸಿಜೆಐ, ವಿಶೇಷ ವಿವಾಹ ಕಾಯ್ದೆಯ ಆಡಳಿತದಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಸಂಸತ್ತು ನಿರ್ಧರಿಸುತ್ತದೆ ಎಂದು ಹೇಳಿದರು.
ನ್ಯಾಯಾಲಯವು ಕಾನೂನನ್ನು ಮಾಡಲು ಸಾಧ್ಯವಿಲ್ಲ, ಅದು ಅದನ್ನು ವ್ಯಾಖ್ಯಾನಿಸಬಹುದಷ್ಟೆ, ಅದನ್ನು ಜಾರಿಗೆ ತರುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು. ಈ ವಿಷಯದ ಕುರಿತು ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ಏಪ್ರಿಲ್ 18ರಂದು ಪ್ರಾರಂಭವಾಗಿತ್ತು.