Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಐಟಿ ದಾಳಿ; 94 ಕೋಟಿ ರೂ. ನಗದು, ಚಿನ್ನಾಭರಣಗಳ ವಶ

ನವದೆಹಲಿ: ಕರ್ನಾಟಕ ಮತ್ತು ಕೆಲವು ಇತರ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯು (ಐಟಿ ಇಲಾಖೆ) 94 ಕೋಟಿ ರೂ. ನಗದು, 8 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು ವಿದೇಶಿ ನಿರ್ಮಿತ 30 ಐಷಾರಾಮಿ ವಾಚ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಸಿಬಿಡಿಟಿ ಸೋಮವಾರ ತಿಳಿಸಿದೆ.

ಅಕ್ಟೋಬರ್ 12ರಂದು ಐಟಿ ಅಧಿಕಾರಿಗಳು ವಿವಿಧ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದರು ಮತ್ತು ಶೋಧ ಕಾರ್ಯ ಪ್ರಾರಂಭಿಸಿದರು. ಬೆಂಗಳೂರು ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ದೆಹಲಿಯ ಕೆಲವು ನಗರಗಳಲ್ಲಿ ಇಲಾಖೆಯು ಒಟ್ಟು 55 ಕಡೆಗಳಲ್ಲಿ ದಾಳಿ ನಡೆಸಿದೆ.

‘ಈ ವೇಳೆ ಅಂದಾಜು 94 ಕೋಟಿ ರೂ. ನಗದು ಮತ್ತು 8 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ತಿಳಿಸಿದೆ.

ಇದಲ್ಲದೆ, ಶೋಧದ ಸಮಯದಲ್ಲಿ, ವಾಚ್‌ಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿರದ ಖಾಸಗಿ ಉದ್ಯೋಗಿ ಬಳಿ ವಿದೇಶಿ ನಿರ್ಮಿತ ಸುಮಾರು 30 ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದೆ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಆದಾಯ ತೆರಿಗೆ ಇಲಾಖೆಗೆ ನೀತಿಗಳನ್ನು ರೂಪಿಸುತ್ತದೆ.

No Comments

Leave A Comment