ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ತುಳು ನಾಡನ್ನೇ ಸೃಷ್ಟಿಸಿದ ಪರಶುರಾಮ- ನಕಲಿ ಪರಶುರಾಮನನ್ನು ಸೃಷ್ಟಿಸಿದ ಸುನಿಲ್ ಕುಮಾರ- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ: ಕೇವಲ ತನ್ನ ಸ್ವಂತ ಪ್ರಚಾರಕ್ಕಾಗಿ ಹಾಗೂ ಈ ನಕಲಿ ಮೂರ್ತಿಯನ್ನು ಸೃಷ್ಟಿ ಮಾಡಿ ಪ್ರತಿಷ್ಠಾಪಿಸಿ ರಾಜ್ಯದ ಜನತೆಗೆ ಸುಳ್ಳು ಮಾಹಿತಿಯನ್ನು ನೀಡಿ ಕೋಟ್ಯಂತರ ರೂಪಾಯಿ ವಂಚಿಸಿ ಕಾರ್ಕಳ ಕ್ಷೇತ್ರ ಮಾತ್ರವಲ್ಲದೆ ಈ ರಾಜ್ಯದ ಮತದಾರ ರನ್ನು ವಂಚಿಸಿದ ಈ ನಕಲಿ ಮೂರ್ತಿ ಪ್ರತಿಷ್ಠಾಪನೆಗೆ ಆಗಮಿಸಿ ತನ್ನ ಪಾಲುಗಾರಿಕೆಯನ್ನು ಇದರಲ್ಲಿ ತೋರಿಸಿದಂತ ರಾಜ್ಯದ ಮಾಜಿ ಮುಖ್ಯಮಂತ್ರಿ ಮಾನ್ಯ ಬಸವರಾಜ ಬೊಮ್ಮಾಯಿ ಸಹಿತ ಈ ವಂಚನೆ ಪ್ರಕರಣದಲ್ಲಿ ಪಾಲ್ಗೊಂಡಿರುವ ಎಲ್ಲ ಸರಕಾರದ ಸ್ವಾಧೀನದ ಎಲ್ಲ ಸಂಸ್ಥೆಗಳ ಅಧಿಕಾರಿಗಳ ವಿಚಾರಣೆಗೆ ವಿಶೇಷವಾಗಿ ಇದಕ್ಕೋಸ್ಕರವಾಗಿ ತನಿಖಾ ತಂಡವನ್ನು ರಚಿಸಿ ಈ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವ ಎಲ್ಲರನ್ನು ಗುರುತಿಸಿ ಅವರನ್ನು ಶಿಕ್ಷಿಸುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.