Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

IND vs PAK, ICC World Cup: ಭಾರತದ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಪಾಕ್: ರೋಹಿತ್ ಪಡೆಗೆ 192 ರನ್​​ಗಳ ಟಾರ್ಗೆಟ್

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ನ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಣ ಪಂದ್ಯ ರೋಚಕತೆ ಸೃಷ್ಟಿಸಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 191 ರನ್​ಗೆ ಆಲೌಟ್ ಆಗಿದೆ. ಒಂದು ಹಂತದಲ್ಲಿ ದೊಡ್ಡ ಸ್ಕೋರ್ ಕಲೆಹಾಕುವ ಸೂಚನೆ ನೀಡಿದ್ದ ಬಾಬರ್ ಪಡೆಗೆ ಕುಲ್ದೀಪ್ ಹಾಗೂ ಬುಮ್ರಾ ಶಾಕ್ ನೀಡಿ ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಸದ್ಯ ಭಾರತ ಗೆಲ್ಲಲು 192 ರನ್​ಗಳ ಅವಶ್ಯಕತೆ ಇದೆ.

ಟಾಸ್ ಸೋತು ಪಾಕ್ ಪರ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ ಶಫೀಖ್ ಹಾಗೂ ಇಮಾನ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 8 ಓವರ್ ಆಗುವ ಹೊತ್ತಿಗೆ 41 ರನ್ ಗಳಿಸಿದ್ದಾಗ ಸಿರಾಜ್ ಬೌಲಿಂಗ್​ನಲ್ಲಿ ಶಫೀಖ್ (20) ಎಲ್​ಬಿ ಬಲೆಗೆ ಸಿಲುಕಿದರು. ನಂತರ ಇಮಾಮ್ (36) ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಕೀಪರ್ ರಾಹುಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಈ ಸಂದರ್ಭ ಜೊತೆಯಾದ ಪಾಕ್ ಅನುಭವಿ ಬ್ಯಾಟರ್​ಗಳಾದ ನಾಯಕ ಬಾಬರ್ ಅಝಂ ಹಾಗೂ ಮೊಹಮ್ಮದ್ ರಿಝ್ವಾನ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು.

ಭಾರತೀಯ ಬೌಲರ್​ಗಳ ಮರ್ಮವನ್ನು ಅರಿತ ಬಾಬರ್-ರಿಝ್ವಾನ್ ಜೋಡಿ 82 ರನ್​ಗಳ ಕಾಣಿಕೆ ನೀಡಿದರು. ಫಾರ್ಮ್ ವೈಫಲ್ಯದಿಂದ ಬಳಲುತ್ತಿದ್ದ ಬಾಬರ್ ಅರ್ಧಶತಕ ಸಿಡಿಸಿದರು. ಆದರೆ, 50 ರನ್ ಗಳಿಸಿದ ಕೂಡಲೇ ಬಾಬರ್ ಅವರು ಸಿರಾಜ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಇದರ ಬೆನ್ನಲ್ಲೆ ಕುಲ್ದೀಪ್, ಸೌದ್ ಶಕೀಲ್ (6) ಅವರನ್ನು ಎಲ್​ಬಿಡಬ್ಲ್ಯೂ ಮಾಡಿದರೆ, ಇಫ್ತಿಖರ್ ಅಹ್ಮದ್​ರನ್ನು (4) ಬೌಲ್ಡ್ ಮಾಡಿದರು. ಅತ್ತ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ರಿಝ್ವಾನ್ 49 ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಶಬಾದ್ ಖಾನ್ ಕೂಡ 2 ರನ್​ಗೆ ಔಟಾದರು.

155 ರನ್​ಗೆ 3ನೇ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 171 ರನ್ ಆಗುವ ಹೊತ್ತಿಗೆ 7 ವಿಕೆಟ್ ಪತನಗೊಂಡಿತು. ದಿಢೀರ್ ಕುಸಿತದಿಂದ ಬಾಬರ್ ಪಡೆ ಮೇಲೇಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪರ ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರು.

No Comments

Leave A Comment