ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಉಡುಪಿಯ ಬನ್ನಂಜೆಯಲ್ಲಿ ಸ್ವಾದಿಷ್ಟ ಹೋಟೆಲ್ ಮಾಲಕನಿಂದ ಅಕ್ರಮ ಬೋರ್ವೆಲ್ ಇವರಿಗೆ ಪರವಾನಿಗೆ ನೀಡಿದವರು ಯಾರು ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ: ನಮ್ಮ ಉಡುಪಿಯ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಪಕ್ಕದಲ್ಲಿ ನಡೆದಾಡಿಕೊಂಡು ಹೋಗುವ ಫುಟ್ ಪಾತ್ನಲ್ಲಿ ಅಕ್ರಮವಾಗಿ ಅಲ್ಲಿ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿರುವ ಇದರ ಮಾಲಕರು ಅಕ್ರಮವಾಗಿ ಇಲ್ಲಿ ಬೋರ್ವೆಲ್ ಅನ್ನು ತೋಡಿಸುತ್ತಿದ್ದಾರೆಈ ಪರಿಸರದಲ್ಲಿ ಮುಖ್ಯ ಸಮಸ್ಯೆಯಾದ ಒಳಚರಂಡಿ ಇದರಿಂದಾಗಿ ಇಲ್ಲಿ ನೂರಾರು ಭಾವಿಗಳು ಇದೀಗಲೇ ಹಾಳಾಗಿ ಹೋಗಿ ಇಲ್ಲಿ ಜನರು ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ನಗರಸಭೆ ಈ ಈ ಬನ್ನಂಜೆ ವಾರ್ಡ್ ಹಾಗೂ ಸಿರಿ ಬೀಡು ವಾರ್ಡ್ ಇಲ್ಲಿಗೆ ಸರಿಯಾಗಿ ನೀರನ್ನೆ ಒದಗಿಸುತ್ತಿಲ್ಲ ಇಲ್ಲಿನ ಸ್ಥಳೀಯರು ಸ್ಥಳೀಯ ಬೇರೆ ಬೇರೆ ಬಾವಿಗಳಲ್ಲಿ ನೀರನ್ನು ತೆಗೆದುಕೊಂಡು ಉಪಯೋಗಿಸುತ್ತಿದ್ದಾರೆಈ ವರ್ಷ ನೀರಿನ ಸಮಸ್ಯೆ ತುಂಬಾ ಇದ್ದು ಈ ಬೋರ್ವೆಲ್ನಿಂದಾಗಿ ಸ್ಥಳೀಯ ಬಾವಿಗಳಲ್ಲಿ ಸುಮಾರು 200 ಮೀಟರ್ ವರೆಗೆ ನೀರು ಇಲ್ಲದಂತಾಗೋದು ಖಚಿತ ಮಾತ್ರವಲ್ಲದೆ ಕೃಷಿ ಪ್ರದೇಶಕ್ಕೆ ಮಾತ್ರ ಕೃಷಿ ಭೂಮಿಗಳಿಗೆ ನೀರುಣಿಸಲು ಈ ಕೊಳವೆ ಬಾವಿಗಳಿಗೆ ಪರವಾನಿಗೆಯನ್ನು ನೀಡುತ್ತಾರೆ ಆದರೆ ಈ ನಗರ ಪ್ರದೇಶದ ಮಧ್ಯಭಾಗದಲ್ಲಿ ಇದಕ್ಕೆ ಪರವಾನಿಗೆಯನ್ನು ನೀಡಿದವರು ಯಾರು ಅಕ್ರಮ ಪರವಾನಿಗೆ ನೀಡಿದವ ರನ್ನು ಕೂಡಲೇ ಅಮಾನತುಗೊಳಿಸಿ.

ಈ ಹೋಟೆಲ್ ಲೈಸೆನ್ಸ್ ಅನ್ನು ಕೂಡಲೇ ರದ್ದುಗೊಳಿಸಬೇಕು ಇದರ ಬಗ್ಗೆ ಉಡುಪಿಯ ಜಿಲ್ಲಾಧಿಕಾರಿಯವರು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಥಳೀಯರಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಇರುವನೂರಾರು ಹೋಟೆಲ್ ಗಳಿಗೂ ಕೊಳವೆ ಬಾವಿಯನ್ನುತೋಡುವಂತಹ ಅವಕಾಶವನ್ನು ನೀಡಲಿ ಸ್ಥಳೀಯರನ್ನುಗಣನೆಗೆ ತೆಗೆದುಕೊಳ್ಳದೆ ಮನಬಂದಂತೆ ಇದಕ್ಕೆ ಅವಕಾಶ ನೀಡಿದಂತಹ ಎಲ್ಲಾ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು ಅಷ್ಟು ಮಾತ್ರವಲ್ಲದೆ ಇದೇ ರೀತಿಯಾಗಿ ಎಲ್ಲಿ ಎಲ್ಲಿ ಈ ಕೊಳವೆ ಬಾವಿಯನ್ನು ತೋ ಡಿಸಲು ಅವಕಾಶವನ್ನು ನೀಡಿ ಕೊಳವೆ ಬಾವಿಯನ್ನುತೋಡಲಾಗಿದೆಯೋ ಇದನ್ನೆಲ್ಲ ಅಕ್ರಮ ವೆಂದುಪರಿಗಣಿಸಿ ಆ ಎಲ್ಲಾ ಪರವಾನಿಯನ್ನು ರದ್ದುಗೊಳಿಸಬೇಕು.

ಇದಕ್ಕೆ ಅವಕಾಶ ನೀಡಿದ ಗಣೀ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳನ್ನು ಕೂಡ ವಿಚಾರಣೆ ನಡೆಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ಉಡುಪಿಯ ಜಿಲ್ಲಾಧಿಕಾರಿ ಗಳನ್ನು ಒತ್ತಾಯಿಸಿ ಇರುತ್ತಾರೆ ಇದಕ್ಕೆ ಸ್ಪಂದಿ ಸ ದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೂ ಮನವಿಯನ್ನು ಸಲ್ಲಿಸಲು ನಮ್ಮ ಸಮಿತಿ ನಿರ್ಧರಿಸಿದೆ ಎಂದು ತಿಳಿಸಿರುತ್ತಾರೆ

No Comments

Leave A Comment