ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ:ರೋಟರಿ ಉಡುಪಿ ಸ೦ಸ್ಥೆಯ ನಿವೇದನೆಯ ಮೇರೆಗೆ ಬ್ರಾಡಿ ಇ೦ಡಿಯಾ ಕ೦ಪನಿ ಬೆ೦ಗಳೂರು ಇವರ ಸಿ.ಎಸ್.ಆರ್ ಫ೦ಡಿನ ಆಶ್ರಯದಲ್ಲಿ ಅನುದಾನಿತ ಖಾಸಗಿ ಹಿರಿಯಪ್ರಾಥಮಿಕ ಶಾಲೆ ಕುಕ್ಕಿಕಟ್ಟೆ ಇಲ್ಲಿನ ಅಧ್ಯಾಪಕಿಯರ ಸ೦ಬಳಕ್ಕೆ ಬಿಡುಗಡೆಮಾಡಲ್ಪಟ್ಟ 3ಲಕ್ಷರೂಪಾಯಿಯ ಪ್ರಥಮ ಕ೦ತಿನ ರೂಪಾಯಿ 1ಲಕ್ಷದ 50ಸಾವಿರ ರೂಪಾಯಿಯ ಚೆಕ್ಕನ್ನು ಶನಿವಾರದ೦ದು ಶಾಲಾ ಸಭಾಭವನದಲ್ಲಿ ಬ್ರಾಡಿ ಇ೦ಡಿಯಾ ಕ೦ಪನಿಯ ಪ್ರತಿನಿಧಿಯಾಗಿರುವ ಪ್ರಕಾಶ್ ಆಚಾರ್ಯರವರು ಶಾಲಾಭಿವೃದ್ಧಿ ಸಮಿತಿಗೆ ಹಸ್ತಾ೦ತರಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ಅಣ್ಣಯ್ಯ ಸೇರಿಗಾರ್ ಸಮಾರ೦ಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಮಾರ೦ಭದಲ್ಲಿ ರೋಟರಿ ಉಡುಪಿ ಇದರ ಅಧ್ಯಕ್ಷೆ ರೋ.ಪಿ ಎಚ್ ಎಫ್ ದೀಪಾಭ೦ಡಾರಿ,ಕಾರ್ಯದರ್ಶಿ ರೋ.ಪಿ ಎಚ್ ಎಫ್ ಶುಭಾ ಬಾಸ್ರಿ,ರೋಟೆರಿಯನ್ ಗುರುರಾಜ್ ಭಟ್,ದಿನೇಶ ಭ೦ಡಾರಿರವರು ಸಮಾರ೦ಭದ ಮುಖ್ಯ ಅತಿಥಿಗಳಾಗಿ ಭಾಗವವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಧರ ದೇವಾಡಿಗ,ಶಾಲಾ ಹಳೆ ವಿದ್ಯಾರ್ಥಿ ಸಲೀ೦ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸ೦ದರ್ಭದಲ್ಲಿ ಬ್ರಾಡಿ ಇ೦ಡಿಯಾ ಕ೦ಪನಿಯ ಪ್ರತಿನಿಧಿಯಾಗಿರುವ ಪ್ರಕಾಶ್ ಆಚಾರ್ಯ ಹಾಗೂ ರೋಟರಿ ಉಡುಪಿ ಸ೦ಸ್ಥೆಯ ಅಧ್ಯಕ್ಷೆ ಹಾಗೂ ಕಾರ್ಯದರ್ಶಿರವರನ್ನು ಅಭಿನ೦ದಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಸಹಸ೦ಚಾಲಕರಾದ ಈಶ್ವರಶೆಟ್ಟಿ ಚಿಟ್ಪಾಡಿರವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ,ಶಾಲಾ ನಿವೃತ್ತ ಮುಖ್ಯೋಪಾದ್ಯಾಯಿನಿ ವಿದ್ಯಾರತ್ನವ೦ದಿಸಿದರು.