Log In
BREAKING NEWS >
ಡಿ.7ರ ಗುರುವಾರದ೦ದು ಸಾಯಂಕಾಲ 4.00 ಘಂಟೆಗೆ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ ಗೋಕರ್ಣಮಠಾಧೀಶರ ಪ್ರಥಮ ಭೇಟಿ....

ಬಿಜೆಪಿ ಜೆಡಿಎಸ್ ಮೈತ್ರಿ ಬಿಜೆಪಿಯವರಿಗೆ ಗತಿಯಿಲ್ಲ ಜೆಡಿಎಸ್ ನವರಿಗೆ ಮತಿ ಇಲ್ಲ ಎಂಬಂತಾಗಿದೆ – ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ:ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಂಪೂರ್ಣ ರಾಜ್ಯದಾದ್ಯಂತ ಧೂಳಿಪಟವಾಗಿದ್ದು ಬಿಜೆಪಿಯು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನುಕರೆತಂದು ರಾಜ್ಯದಾದ್ಯಂತ ಅಬ್ಬರದ ಪ್ರಚಾರ ನಡೆಸಿದರು.  ರಾಜ್ಯದ ಮತದಾರರು ಮೋದಿ ಅವರ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಬಿಜೆಪಿ ನಾಯಕರ ಭ್ರಷ್ಟ ಆಡಳಿತ ಕಂಡ ರಾಜ್ಯದ ಮತದಾರರು ಮೋದಿ ಹಾಗೂ ಬಿಜೆಪಿ ನಾಯಕರನ್ನು ಬೆಂಬಲಿಸದೆ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ.

ಇದರಿಂದ ಕಂಗೆಟ್ಟ ಮೋದಿ ಹಾಗೂ ಕೇಂದ್ರದ ಬಿಜೆಪಿ ನಾಯಕರು ರಾಜ್ಯದ ಬಿಜೆಪಿ ನಾಯಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ ಪ್ರತಿಪಕ್ಷದ ನಾಯಕನನ್ನು ಇನ್ನು ಆಯ್ಕೆ ಮಾಡದಿರುವುದು ರಾಜ್ಯದ ಬಿಜೆಪಿಯವರಿಗೆ ಗತಿ ಇಲ್ಲದ ಪರಿಸ್ಥಿತಿ ಬಂದು ಒದಗಿದೆ.

ಇನ್ನು ಚುನಾವಣೆಯಲ್ಲಿ ತಮಗೆ ಹೆಚ್ಚು ಸ್ಥಾನ ಬಂದು ತಾವೇ ಕಿಂಗ್ ಮೇಕರ್ ಆಗುತ್ತೇವೆ ಎಂದು ಬೀಗುತ್ತಿದ್ದ ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಯವರ ನಾನು ಮಗದೊಮ್ಮೆ ಮುಖ್ಯಮಂತ್ರಿ ಯಾಗುತ್ತೇನೆ ಎಂಬ ಕನಸಿಗೆ ರಾಜ್ಯದ ಜನರು ನೀರು ಹೊಯ್ದಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಅನ್ನು ಸಂಪೂರ್ಣ ಮೂಲೆಗುಂಪು ಮಾಡಿಬಿಟ್ಟಿದ್ದಾರೆ ಇದರಿಂದಾಗಿ ಜೆಡಿಎಸ್ ನಾಯಕರು ಸಂಪೂರ್ಣವಾಗಿ ಮತಿ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಡೋಂಗಿ ಪೆನ್ ಡ್ರೈವ್ ಹಿಡಿದುಕೊಂಡು ಜನರನ್ನು ಮೋಸಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಮುಂದೆ ನಡೆಯುವ ಎಲ್ಲಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿ ಹಾಗೂ ಈ ಜೆಡಿಎಸ್ ಮೈತ್ರಿ ಅನ್ನು ಧೂಳಿಪಟಗೋಳಿಸುವುದು ನಿಶ್ಚಿತ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

No Comments

Leave A Comment