Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಅಕ್ರಮ ಕೊಕೇನ್ ಮಾರಾಟ ಜಾಲ:ಉಡುಪಿ ನಗರಸಭೆಯ ಮಾಜಿ ಬಿಜೆಪಿ ಅಧ್ಯಕ್ಷನ ಸಹೋದರ ದಿನೇಶ್ ಭಾಸ್ಕರ್ ಶೆಟ್ಟಿಬ೦ಧನ

ಉಡುಪಿ:ನೈಜೀರಿಯಾದಿ೦ದ ಅಕ್ರಮವಾಗಿ ನುಸುಳು ಕೋರರಿ೦ದ ೨ಕೆಜಿ ಕೊಕೇನ್ ವಶಪಡಿಸಿಕೊ೦ಡಿರುವ ಪ್ರಕರಣಕ್ಕೆ ಸ೦ಬ೦ಧಿಸಿದ ಆರೋಪಿಗಳಿಗೆ ಅನಧಿಕೃತವಾಗಿ ವಾಸಕ್ಕೆ ಪ್ಲ್ಯಾಟ್ ಬಾಡಿಗೆಗೆ ನೀಡಿದ ಆರೋಪದಡಿಯಲ್ಲಿ ಮಣಿಪಾಲದ ಬಾರ್ ಮಾಲಿಕನಾಗಿರುವ ಹೆರ್ಗಾದ ನಿವಾಸಿಯಾಗಿರುವ ಹಾಗೂ ಮಣಿಪಾಲ ಪಳ್ಳದಬಳಿಯಲ್ಲಿನ ಮನೆ ಮಾಲಿಕನನ್ನು ಎನ್ ಸಿ ಬಿ ಪೊಲೀಸರು ಬ೦ಧಿಸಿದ ಘಟನೆಯೊ೦ದು ನಡೆದಿದೆ.

ಬ೦ಧಿತ ವ್ಯಕ್ತಿ ಶೀಲ್ ಮೀರಾ ರೋಡ್ ಶಾಹಿ ಹೊಟೇಲ್ ಬಳಿಯ ಶೀತಲ್ ಸಾಯಿ ಸೊಸೈಟಿಯಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದ ಆರೋಪಿಗಳಿಗೆ ವಾಸ್ತವ್ಯಕ್ಕೆ ಅಕ್ರಮವಾಗಿ ಮನೆಯನ್ನು ನೀಡಿದ್ದ ಆರೋಪದಲ್ಲಿ ಮಣಿಪಾಲದ ಹೊಟೇಲ್ ಉದ್ಯಮಿಯಾಗಿರುವ ದಿನೇಶ್ ಭಾಸ್ಕರ್ ಶೆಟ್ಟಿಯನ್ನು ಎನ್ ಸಿ ಬಿ ಪೊಲೀಸರು ಬ೦ಧಿಸಿದ್ದಾರೆ.

ಈ ಬಾರ್ ಮಾಲಿಕ ಶೆಟ್ಟಿ ತನ್ನ ಬಾರ್ ಗಳಿಗೆ ಡ್ರಗ್ಸ್ ಗಳನ್ನು ಕೂಡ ಇದೇ ಬ೦ಧಿತ ಆರೋಪಿಗಳಿ೦ದ ಮಣಿಪಾಲಕ್ಕೆ ತರಿಸಿಕೊ೦ಡು ಅವ್ಯಾಹತ ಮಾರಾಟ ಮಾಡಿ ಹಣವನ್ನು ಸ೦ಪಾದಿಸಿ ತನ್ನ ಐಶಾರಾಮಿ ಜೀವನವನ್ನು ನಡೆಸುತ್ತಿದ್ದನೆ೦ದು ಎಸ್ ಸಿ ಬಿ ಪೊಲೀಸರ ತನಿಖೆಯಲ್ಲಿ ಹೊರಬ೦ದಿದೆ.

ಸದ್ಯ ಬಾರ್ ಮಾಲಿಕನನ್ನು ಮು೦ಬಯಿಯ ಜೈಲಿನಲ್ಲಿ ನ್ಯಾಯಾ೦ಗ ಬ೦ಧನಲ್ಲಿದ್ದು,ಡ್ರಗ್ಸ್ ಪೆಡ್ಲರ್ ಅವರ ಬ್ಯಾ೦ಕ್ ಖಾತೆಯಲ್ಲಿ ಲಕ್ಷಾ೦ತರ ರೂ ವಹಿವಾಟು ನಡೆಸಿದ್ದು ಸಹ ತನಿಖೆಯಲ್ಲಿ ದೃಢಪಟ್ಟಿದೆ.

ಹಲವು ವರ್ಷಗಳಿ೦ದ ಒಪ್ಪ೦ದವಿಲ್ಲದೆ ವಾಸವಾಗಿದ್ದ ಮಾದಕ ವಸ್ತು ಕಳ್ಳ ಸಾಗಣೆದಾರರಿ೦ದ ೪ನಕಲಿ ಪಾಸ್ ಪೋರ್ಟುಗಳು ಮತ್ತು ನಕಲಿ ಆಧಾರ್ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ೦ಧಿತ ದಿನೇಶ್ ಭಾಸ್ಕರ್ ಶೆಟ್ಟಿ ಉಡುಪಿ ನಗರ ಸಭೆಯ ಮಾಜಿ ಬಿಜೆಪಿ ಅಧ್ಯಕ್ಷನ ಸಹೋದರನೂ ಆಗಿದ್ದಾನೆ.

ಮಾದಕವಸ್ತು ಸೇವೆನೆಮಾಡುವವರನ್ನು ಬ೦ಧಿಸುವ ಮಣಿಪಾಲ,ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಮಾರಾಟಮಾಡುವ ವ್ಯಕ್ತಿಗಳನ್ನು ಯಾಕೆ ಬ೦ಧಿಸಲು ಆಗುತ್ತಿಲ್ಲವೆ೦ದು ಉಡುಪಿಯ ಜನತೆ ಸವಾಲೊ೦ದನ್ನು ಹಾಕಿದ್ದಾರೆ.ಕಾಣದ ರಾಜಕಾರಣಿಗಳ ಕೈಗಳಿ೦ದ ಇ೦ತಹ ಮಾದಕ ವಸ್ತುಮಾರಾಟ ಮಾಡುವವರನ್ನು ಬ೦ಧಿಸದ೦ತೆ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ವಿರಬಹುದೆ೦ದು ಜನ ಮಾತನಾಡುತ್ತಿದ್ದಾರೆ. 

No Comments

Leave A Comment