ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

Asian Games 2023: ಸ್ಕ್ವಾಷ್‌ನಲ್ಲಿ ಪಾಕಿಸ್ತಾನ ಮಣಿಸಿ ಚಿನ್ನ ಗೆದ್ದ ಭಾರತ

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಪುರುಷರ ಟೀಮ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.

ಪಾಕಿಸ್ತಾನದ ನೂರ್ ಜಮಾನ್ ಅವರನ್ನು ಭಾರತದ ಅಭಯ್ ಸಿಂಗ್ ಸೀಸಾ ಡಿಸೈಡ್‌ನಲ್ಲಿ 3-2 ಅಂತರದಲ್ಲಿ ಮಣಿಸಿದರು. ಆ ಮೂಲಕ ಭಾರತ ಮತ್ತೊಮ್ಮೆ ಸ್ಕ್ವಾಷ್ ನಲ್ಲಿ ಚಿನ್ನದ ಪದಕ ಜಯಿಸಿದೆ.

ಈ ಹಿಂದೆ ಇದೇ ಕ್ರೀಡಾಕೂಟದ ಲೀಗ್ ಹಂತದ ಪಂದ್ಯದಲ್ಲಿ ಭಾರತ ಇದೇ ಪಾಕಿಸ್ತಾನ ಜೋಡಿಯ ವಿರುದ್ದ ಸೋಲುಕಂಡಿತ್ತು. ಆದರೆ ಫೈನಲ್ ನಲ್ಲಿ ಇದೇ ಜೋಡಿಯನ್ನು ಮಣಿಸುವ ಮೂಲಕ ತನ್ನ ಸೋಲಿನ ಸೇಡು ತೀರಿಸಿಕೊಂಡಿದೆ.

ಭಾರತ ಕೊನೆಯ ಬಾರಿಗೆ 2014 ರಲ್ಲಿ ಇಂಚೆನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಪುರುಷರ ತಂಡ ಸ್ಕ್ವಾಷ್‌ನಲ್ಲಿ ಚಿನ್ನ ಗೆದ್ದಿದ್ದರೆ, ಪಾಕಿಸ್ತಾನಿಗಳು 2010 ರಲ್ಲಿ ಗುವಾಂಗ್‌ಝೌನಲ್ಲಿ ಕೊನೆಯದಾಗಿ ಚಿನ್ನವನ್ನು ಗೆದ್ದಿದ್ದರು.

No Comments

Leave A Comment