ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
2000 ರೂ. ಮುಖಬೆಲೆ ನೋಟು ಹಿಂತಿರುಗಿಸಲು ಕೇವಲ 3 ದಿನಗಳಷ್ಟೇ ಬಾಕಿ.!
ಬೆಂಗಳೂರು:ಸೆ 27. ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಹೇಳಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಿಂಕ್ ನೋಟ್ ಹಿಂದಿರುಗಿಸಿ, ಬೇರೆ ನೋಟು ಪಡೆಯುವಂತೆ ಸೆ.30ರವರೆಗೆ ಗಡುವು ನೀಡಿತ್ತು. ಸದ್ಯ ಈ ಅವಧಿ ಮುಕ್ತಾಯದ ಹಂತದಲ್ಲಿದ್ದು ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ.
ಕಳೆದ ಮೇ ನಲ್ಲಿ 2000 ರೂ.ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್ ಬಿ ಐ ಹಿಂಪಡೆದುಕೊಂಡಿತ್ತು. ಈ ನೋಟು ಪರಿಚಯಪಡಿಸಿದ ಕೇವಲ ಏಳು ವರ್ಷಗಲ್ಲೇ, ಭಾರತವು ರೂ 2000 ನೋಟಿಗೆ ವಿದಾಯ ಹೇಳುತ್ತದೆ ಅನ್ನೋದು ವಿಶೇಷ.
ನೋಟ್ ಹಿಂಪಡೆಯುವ ಬಗ್ಗೆ ಆರ್‌ಬಿಐ ಘೋಷಿಸಿದ ಆರಂಭದಲ್ಲಿ ಬ್ಯಾಂಕ್‌ಗಳಿಗೆ ನೋಟು ಹಿಂತಿರುಗಿಸುವವರ ಸಂಖ್ಯೆ ಕೊಂಚ ಹೆಚ್ಚಾಗಿತ್ತು. ಆದರೆ ದಿನ ಕಳೆದಂತೆ ಈ ನೋಟು ಹಿಂತಿರುಗಿಸುವವರ ಪ್ರಮಾಣದಲ್ಲಿ ಕುಸಿತವಾಗಿದೆ. ಇನ್ನು 3 ದಿನ ಮಾತ್ರ ಬಾಕಿ ಇರುವ ಹಿನ್ನೆಲೆ ಆದಷ್ಟು ಬೇಗ ನೋಟ್ ಬದಲಿಸಿಕೊಳ್ಳಬೇಕಿದೆ.ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳ ಪೈಕಿ, ಶೇ.93ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ಮರಳಿವೆ.
ಸೆ. 30 ರ ನಂತರ 2000 ರೂಪಾಯಿ ನೋಟು ಏನಾಗುತ್ತದೆ?
ನೋಟುಗಳು ಸೆಪ್ಟೆಂಬರ್ ಅಂತ್ಯದ ನಂತರವೂ ಕಾನೂನುಬದ್ಧವಾಗಿರುತ್ತವೆ, ಆದರೆ ಯಾವುದೇ ರೀತಿಯ ವಹಿವಾಟು ಉದ್ದೇಶಗಳಲ್ಲಿ ಸ್ವೀಕರಿಸಲಾಗುವುದಿಲ್ಲ.
ನೀಡಲಾದ ಗಡುವನ್ನು ಮೀರಿ ಈ ನೋಟುಗಳನ್ನು ಬಳಸುತ್ತಿರುವುದು ಕಂಡುಬಂದರೆ, ಗಡುವನ್ನು ಮೀರಿ ನೋಟು ಹೊಂದಲು ಕಾರಣವೇನು ಎಂಬುವುದನ್ನು RBI ಗೆ ವಿವರಿಸಬೇಕಾಗುತ್ತದೆ.