Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಯಮಹಾ ದ್ವಿಚಕ್ರಗಳ ಶೋರೂಂ ಉಡುಪಿ ಮೋಟರ್ಸ್ ಇದೀಗ ಪ್ರೀಮಿಯಂ ದರ್ಜೆಗೆ- ಕರಾವಳಿ ಕರ್ನಾಟಕದ ಪ್ರಪ್ರಥಮ ‘ಬ್ಲೂ ಸ್ಕ್ವೇರ್’ ಶೋರೂಂ ಸೆ.28ರ೦ದು ಉದ್ಘಾಟನೆ

ಉಡುಪಿ: ನಗರದ ಗುಂಡಿಬೈಲಿನಲ್ಲಿರುವ ಯಮಹಾ ದ್ವಿಚಕ್ರಗಳ ಶೋರೂಂ ಉಡುಪಿ ಮೋಟರ್ಸ್ ಇದೀಗ ಪ್ರೀಮಿಯಂ ದರ್ಜೆಗೇರಿ ಕರಾವಳಿ ಕರ್ನಾಟಕದ ಪ್ರಪ್ರಥಮ ‘ಬ್ಲೂ ಸ್ಕ್ವೇರ್’ ಶೋರೂಂ ಎಂಬ ಮಾನ್ಯತೆ ಪಡೆದಿದೆ.

ನೂತನವಾಗಿ ಸಂಪೂರ್ಣ ಹವಾನಿಯಂತ್ರಿತ ಬ್ಲೂ ಸ್ಕ್ವೇರ್ ಶೋರೂಮನ್ನು ಯಮಹಾ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಎಚ್. ಕವಾಯಿ ಸ್ಯಾನ್ ರವರು ಸೆ. 28ರಂದು ಗುರುವಾರದ೦ದು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ.

ಈ ಬ್ಲೂ ಸ್ಕ್ವೇರ್ ಶೋರೂಂನಲ್ಲಿ ಯಮಹಾದ ಪ್ರೀಮಿಯಂ ಕ್ಯಾಟಗರಿ ದ್ವಿಚಕ್ರ ವಾಹನಗಳ ಸಹಿತ ಎಲ್ಲಾ ಮಾಡೆಲ್ ನ ಬೈಕ್ ಹಾಗೂ ಸ್ಕೂಟರ್ ಗಳ ಡೆಮೊ ಇದ್ದು, ಉಡುಪಿಯಲ್ಲಿಯೇ ಖರೀದಿ ಮಾಡುವುದು ಸಾಧ್ಯವಾಗಿದೆ. ಈ ಪೈಕಿ MT-15 N2, R-15 V4, R-15 V3, FZ-F1, FZ- SV3, FZ-SV4, F2X ಹಾಗೂ ಭಾರತದಲ್ಲಿಯೇ ಅತ್ಯಧಿಕ ಮೈಲೇಜ್ ನೀಡುವ ಸ್ಕೂಟರ್ ‘ಫ್ಯಾಸಿನೊ’ ಮತ್ತು ರೇ-ZR ಪ್ರದರ್ಶನ ಮತ್ತು ಮಾರಾಟವಿದೆ.

ಯಮಹಾ ಕಂಪೆನಿಯ ಏರೊಕ್ಸ್ 155 ಸ್ಕೂಟರ್ ಕೂಡ ಉಡುಪಿ ಮೋಟರ್ಸ್ ನ ಬ್ಲೂ ಸ್ಕ್ವೇರ್ ಶೋರೂಂನಲ್ಲಿ ಲಭ್ಯವಿದ್ದು, ಇದಕ್ಕಾಗಿ ಬೆಂಗಳೂರಿಗೆ ಹೋಗುವ ಅಗತ್ಯವಿರುವುದಿಲ್ಲ. ಬದಲಾಗಿ ಇದೀಗ ಉಡುಪಿಯಲ್ಲಿಯೇ ಬುಕ್ಕಿಂಗ್ ಮಾಡಿ, ಶೀಘ್ರ ಡೆಲಿವರಿ ಪಡೆಯಬಹುದು.

ಬ್ಲೂ ಸ್ಕ್ವೇರ್ ಶುಭಾರಂಭದ ಅಂಗವಾಗಿ ಗ್ರಾಹಕರಿಗೆ ಉಚಿತ ಉಡುಗೋರೆಗಳು, ವಿನಿಮಯ ಸೌಲಭ್ಯ, ಆಕರ್ಷಕ ರಿಯಾಯಿತಿ ಸಹಿತ ವಿವಿಧ ಕೊಡುಗೆಗಳನ್ನು ನೀಡಲಾಗುವುದು ಎಂದು ಉಡುಪಿ ಮೋಟರ್ಸ್ ಸ೦ಸ್ಥೆಯ ಪ್ರಕಟಣೆತಿಳಿಸಿದೆ.

No Comments

Leave A Comment