ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
Asian Games 2023: ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಶೂಟರ್‌ಗಳು, ಭಾರತದ ಬಳಿ 1 ಚಿನ್ನ, 3 ಬೆಳ್ಳಿ, 6 ಕಂಚು ಸೇರಿ ಒಟ್ಟು 10 ಪದಕ
ಹಾಂಗ್‌ಝೌ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಈವರೆಗೆ ಒಂದು ಚಿನ್ನ, ಮೂರು ಬೆಳ್ಳಿ ಹಾಗೂ ಆರು ಕಂಚಿನ ಪದಕ ಸೇರಿ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿದೆ.
ಕ್ರೀಡಾಕೂಟದ 2ನೇ ದಿನವಾದ ಇಂದು ಪುರುಷರ 10 ಮೀಟರ್ ಏರ್‌ರೈಫಲ್ ವಿಭಾಗದಲ್ಲಿ ಭಾರತದ ರುದ್ರಾಂಕ್ಷ್ ಪಾಟೀಲ್, ದಿವ್ಯಾಂಗ್ ಪನ್ವಾರ್ ಮತ್ತು ಐಶ್ವರ್ಯ ತೋಮರ್ ಚಿನ್ನದ ಪದಕವನ್ನು ಜಯಿಸಿದ್ದಾರೆ. 10 ಮೀಟರ್ ಏರ್‌ರೈಫಲ್ ವಿಭಾಗದಲ್ಲಿ ಐಶ್ವರ್ಯ ಪ್ರತಾಪ್‌ಸಿಂಗ್ ತೋಮರ್ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ.
ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಅವರು ವಿಶ್ವದಾಖಲೆ ನಿರ್ಮಿಸಿ. ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
19ನೇ ಏಷ್ಯನ್ ಗೇಮ್ಸ್ನ ಮೊದಲ ದಿನ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಶೂಟಿಂಗ್‌ನಲ್ಲಿ ಮಹಿಳಾ ತಂಡ ವಿಭಾಗದಲ್ಲಿ ಭಾರತ ಆ ಪದಕ ಗೆದ್ದಿತ್ತು. ಮೊದಲ ದಿನ 3 ಬೆಳ್ಳಿ ಹಾಗೂ 2 ಕಂಚು ಗೆದ್ದಿರುವ ಭಾರತ ಎರಡನೇ ದಿನವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಆರಂಭಿಸಿದೆ.
ಇನ್ನು ಎರಡನೇ ದಿನವನ್ನು ಚಿನ್ನದ ಪದಕದೊಂದಿಗೆ ಆರಂಭಿಸಿರುವ ಭಾರತದ ಶೂಟರ್‌ಗಳು ಈ ಚಿನ್ನದ ಪದಕದೊಂದಿಗೆ ವಿಶ್ವ ದಾಖಲೆಯನ್ನೂ ಮುರಿದಿದ್ದಾರೆ.
ಪುರುಷರ 10 ಮೀಟರ್ ಏರ್ ರೈಫಲ್‌ನ ಟೀಮ್ ಈವೆಂಟ್‌ನಲ್ಲಿ, ಭಾರತದ ಮೂವರು ಶೂಟರ್‌ಗಳಾದ ದಿವ್ಯಾಂಶ್ ಸಿಂಗ್ ಪವಾರ್, ರುದ್ರಂಕ್ಷ್ ಬಾಳಾಸಾಹೇಬ್ ಮತ್ತು ಐಶ್ವರ್ಯ ತೋಮರ್ ಸಂಯೋಜಿತ ಸ್ಕೋರ್‌ನೊಂದಿಗೆ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಈ ಮೂವರೂ ಸೇರಿ 1893.7 ಅಂಕಗಳನ್ನು ಕಲೆಹಾಕಿದ್ದು, ಇದು ಈಗ ಹೊಸ ವಿಶ್ವ ದಾಖಲೆಯಾಗಿದೆ.
ಇದಕ್ಕೂ ಮುನ್ನ 1893.3 ಪಾಯಿಂಟ್ ಕಲೆಹಾಕುವ ಮೂಲಕ ಚೀನಾ ಈ ದಾಖಲೆ ಮಾಡಿತ್ತು. ಭಾರತದ ಮೂವರು ಶೂಟರ್‌ಗಳ ಪೈಕಿ ರುದ್ರಂಕ್ಷ್ ಬಾಳಾಸಾಹೇಬ್ ಅವರು 632.5 ಅಂಕಗಳನ್ನು ಗಳಿಸಿದರು. ಇವರಲ್ಲದೆ ಐಶ್ವರ್ಯಾ ತೋಮರ್ 631.6 ಅಂಕ ಗಳಿಸಿದರೆ, ದಿವ್ಯಾನ್ಶ್ ಪವಾರ್ 629.6 ಅಂಕ ಗಳಿಸಿದರು.
ಭಾರತಕ್ಕೆ ಮತ್ತೊಂದು ಕಂಚು
ಶೂಟಿಂಗ್‌ನಲ್ಲಿ ವಿಶ್ವದಾಖಲೆ ಜೊತೆಗೆ ಚಿನ್ನ ಗೆದ್ದ ಭಾರತ ಎರಡನೇ ದಿನವೂ ಕಂಚಿನ ಪದಕದ ಬೇಟೆಯಾಡಿದೆ.
ರೋಯಿಂಗ್‌ನಲ್ಲಿ ಭಾರತಕ್ಕೆ ಈ ಕಂಚಿನ ಪದಕ ಲಭಿಸಿದೆ. ಇಲ್ಲಿ ಪುರುಷರ ನಾಲ್ಕರ ವಿಭಾಗದ ಫೈನಲ್‌ನಲ್ಲಿ ಜಸ್ವಿಂದರ್, ಭೀಮ್, ಪುನಿತ್ ಮತ್ತು ಆಶಿಶ್ 6:10.81 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.