ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ, ಶಿರೂರುಮಠ, ರಾಘವೇ೦ದ್ರಮಠದಲ್ಲಿ ಪೂಜಿಸ್ಪಟ್ಟ ಗಣಪತಿ ಜಲಸ್ತ೦ಭನ ಕಾರ್ಯಕ್ರಮ ಸ೦ಪನ್ನ…

ಉಡುಪಿಯ ಶ್ರೀಕೃಷ್ಣ ಮಠ,ಶಿರೂರುಮಠ,ರಾಘವೇ೦ದ್ರಮಠದಲ್ಲಿ ಪೂಜಿಸ್ಪಟ್ಟ ಗಣಪತಿ ಜಲಸ್ತ೦ಭನ ಕಾರ್ಯಕ್ರಮವು ಗುರುವಾರದ೦ದು ಪರ್ಯಾಯ ಶ್ರೀಕೃಷ್ಣಾಪುರಮಠದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು,ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು,ಶಿರೂರು ಮಠದ ಶ್ರೀವೇದವರ್ಧನ ತೀರ್ಥಶ್ರೀಪಾದರುಗಳ ಉಪಸ್ಥಿತಿಯಲ್ಲಿ ಶ್ರೀಗಣಪತಿ ವಿಗ್ರಹಗಳನ್ನು ಪಲ್ಲಕಿಯಲ್ಲಿರಿಸಿ ರಥಬೀದಿಯಲ್ಲಿ ಮೆರವಣಿಗೆಯನ್ನು ನಡೆಸುವುದರೊ೦ದಿಗೆ ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ದೋಣಿಯಲ್ಲಿ ಇಟ್ಟು ಕೆರೆಯಲ್ಲಿ ಸುತ್ತುಬರುವುದರೊ೦ದಿಗೆ ಜಲಸ್ತ೦ಭನವನ್ನು ಮಾಡಲಾಯಿತು.

ಮೆರವಣಿಗೆಯಲ್ಲಿ ಹುಲಿವೇಷ, ಗಣಪತಿ ವೇಷ,ಸನ್ಯಾಸಿ ವೇಷ, ವಾದ್ಯ,ಬ್ಯಾ೦ಡ್ ಬಿರುದಾವಲಿಯೊ೦ದಿಗೆ ಅಪಾರ ಭಕ್ತ ಜನಸ್ತೋಮದೊ೦ದಿಗೆ ಈ ಕಾರ್ಯಕ್ರಮವು ಜರಗಿತು.

 

kiniudupi@rediffmail.com

No Comments

Leave A Comment