Log In
BREAKING NEWS >
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪರಮೇಶ್ವರ್ ಅನಂತ್ ಹೆಗ್ಡೆ ನೇಮಕ...

‘ಮಾದೇವ’ ಚಿತ್ರದ ಮೂಲಕ ಮತ್ತೆ ಆ್ಯಕ್ಷನ್‌ಗೆ ಮರಳಿದ ಮಾಲಾಶ್ರೀ!

ನವೀನ್ ರೆಡ್ಡಿ ನಿರ್ದೇಶನದ ಮಾದೇವ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ನಾಯಕನಾಗಿ ಮತ್ತು ಕಿಟ್ಟಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದ  ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದ್ದು, ಕೇವಲ 80 ದಿನಗಳಲ್ಲಿ ಚಿತ್ರೀಕರಿಸಲಾಗಿದೆ.

ವಿಭಿನ್ನ ಕಾಲಘಟ್ಟಗಳ (1965, 1980, ಮತ್ತು 1999) ಸ್ಪೂರ್ತಿದಾಯಕ ಕಥೆ ಎಂದು ವಿವರಿಸಲಾಗಿರುವ ಈ ಚಿತ್ರದಲ್ಲಿ ಮಾಲಾಶ್ರೀ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇದೀಗ ತಿಳಿದು ಬಂದಿದೆ. ಮಾಲಾಶ್ರೀ ಪಾತ್ರದ ಬಗ್ಗೆ ವಿವರಗಳನ್ನು ಬಹಿರಂಗ ಪಡಿಸಿಲ್ಲ, ಆದರೆ ಅವರದ್ದು ಈ ಸಿನಿಮಾದಲ್ಲಿ ಆ್ಯಕ್ಷನ್ ಪಾತ್ರ ಎಂಬುದು ದೃಢಪಟ್ಟಿದೆ.

ವೈವಿಧ್ಯಮಯ  ಪಾತ್ರಗಳಿಂದಲೇ ಫೇಮಸ್ ಆಗಿದ್ದ ಮಾಲಾಶ್ರೀ ಆಕ್ಷನ್ ಪಾತ್ರಗಳಿಗೂ ಅಷ್ಟೇ ಪ್ರಸಿದ್ಧರಾಗಿದ್ದರು. ಮಾಲಾಶ್ರಿಗೆ ಸ್ಟಂಟ್‌ ಕೊರಿಯೋಗ್ರಫಿ ಮಾಡಿರುವ ಥ್ರಿಲ್ಲರ್ ಮಂಜು, ಚಿತ್ರದಲ್ಲಿನ ಅವರ ಸಾಹಸ ದೃಶ್ಯಗಳಿಂದ ಅವರ ಅಭಿಮಾನಿಗಳು ಥ್ರಿಲ್ ಆಗಲಿದ್ದಾರೆ ಎಂದು ಭರವಸೆ ನೀಡಿದ್ದಾರೆ. ಮಾಲಾಶ್ರೀ ಪಾತ್ರದ ಕುರಿತು ಹೆಚ್ಚಿನ ಮಾಹಿತಿಯು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ಆರ್ ಕೇಶವ ನಿರ್ಮಿಸಿರುವ ಮಾದೇವದಲ್ಲಿ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂತೇರೊ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಈ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಚಿತ್ರದಲ್ಲಿ ಶ್ರುತಿ, ಅಚ್ಯುತ್ ಕುಮಾರ್ ಮತ್ತು ಸುದ್ದಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರವು ಕರ್ನಾಟಕ ಮತ್ತು ಹೈದರಾಬಾದ್‌ನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಬಾಹುಬಲಿ ಡಿಒಪಿ ಸೆಂಥಿಲ್ ಕುಮಾರ್ ಅವರ ಮಾಜಿ ಸಹಾಯಕ ಬಾಲಕೃಷ್ಣ ತೋಟ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ,

ಪ್ರದ್ದ್ಯೋತ್ತನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಮಾದೇವ ಜೊತೆಗೆ, ವಿನೋದ್ ಪ್ರಭಾಕರ್ ಫೈಟರ್ ಬಿಡುಗಡೆಯನ್ನು ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ, ಇದು ಅಕ್ಟೋಬರ್‌ನಲ್ಲಿ ಥಿಯೇಟರ್‌ಗಳಲ್ಲಿ ಬರುವ ನಿರೀಕ್ಷೆಯಿದೆ.

No Comments

Leave A Comment