ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವೆ೦ಬರ್ 13ರ೦ದು ವಿಶ್ವರೂಪದರ್ಶನ ಕಾರ್ಯಕ್ರಮವು ಬೆಳಿಗ್ಗೆ 5ಗ೦ಟೆಗೆ ಜರಗಿತು.ನವೆ೦ಬರ್ 18ಹಾಗೂ 19ರ೦ದು ಲಕ್ಷ ದೀಪೋತ್ಸವವು ಜರಗಲಿದೆ.
ಸೂರ್ಯಯಾನ: ಪಯಣದ ನಡುವೆಯೇ ವೈಜ್ಞಾನಿಕ ಮಾಹಿತಿ ಸಂಗ್ರಹ ಕೆಲಸ ಪ್ರಾರಂಭಿಸಿದ ಆದಿತ್ಯ-ಎಲ್ 1 ನೌಕೆ: ಇಸ್ರೋ
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮೊಟ್ಟ ಮೊದಲ ಸೂರ್ಯ ಯೋಜನೆ ಆದಿತ್ಯ-ಎಲ್ 1 ನೌಕೆ ಸೂರ್ಯನತ್ತ ಪಯಣಿಸುತ್ತಲೇ ತನ್ನ ಕಾರ್ಯಾರಂಭ ಮಾಡಿದ್ದು, ವೈಜ್ಞಾನಿಕ ಮಾಹಿತಿ ಸಂಗ್ರಹ ಕೆಲಸ ಪ್ರಾರಂಭಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಹೌದು.. ಭಾರತದ ಮೊಟ್ಟ ಮೊದಲ ಸೌರ ಯೋಜನೆ ಆದಿತ್ಯ-ಎಲ್ 1 ನೌಕೆಯು ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಕಾರ್ಯಾರಂಭಿಸಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಮಾಹಿತಿ ನೀಡಿದೆ.
“ಸುಪ್ರಾ ಥರ್ಮಲ್ ಮತ್ತು ಎನರ್ಜೆಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ ಉಪಕರಣದ ಸಂವೇದಕಗಳು ಭೂಮಿಯಿಂದ 50,000 ಕಿ.ಮೀಗಿಂತಲೂ ಹೆಚ್ಚು ದೂರದಲ್ಲಿ ಸೂಪರ್-ಥರ್ಮಲ್ ಮತ್ತು ಶಕ್ತಿಯುತ ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳನ್ನು ಅಳೆಯಲು ಪ್ರಾರಂಭಿಸಿವೆ. ಈ ದತ್ತಾಂಶವು ವಿಜ್ಞಾನಿಗಳಿಗೆ ಭೂಮಿಯ ಸುತ್ತಲಿನ ಕಣಗಳ ನಡವಳಿಕೆಯನ್ನು ವಿಶ್ಲೇಷಿಸಲು ಸಹಾಯ ಮಾಡುತ್ತವೆ. ಅಂಕಿಅಂಶವು ಒಂದು ಘಟಕದಿಂದ ಸಂಗ್ರಹಿಸಲಾದ ಶಕ್ತಿಯುತ ಕಣ ಪರಿಸರದಲ್ಲಿ ವ್ಯತ್ಯಾಸಗಳನ್ನು ತೋರಿಸುತ್ತದೆ ಎಂದು ಇಸ್ರೋ ತಿಳಿಸಿದೆ.”
ಆದಿತ್ಯ-ಎಲ್ 1 ಕಕ್ಷೆಗೇರಿಸುವ 4ನೇ ಪ್ರಕ್ರಿಯೆ ಕೂಡ ಯಶಸ್ವಿ
ಆದಿತ್ಯ-ಎಲ್ 1 ನೌಕೆಯನ್ನು ಎತ್ತರದ ಕಕ್ಷೆಗೆ ಏರಿಸುವ 4ನೇ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇತ್ತೀಚೆಗೆ ಹೇಳಿತ್ತು. ಬೆಂಗಳೂರಿನ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಈ ಕಾರ್ಯಾಚರಣೆ ನಡೆಸಲಾಗಿತ್ತು. ಸದ್ಯ ಆದಿತ್ಯ ನೌಕೆಯು ಭೂಮಿಯಿಂದ 256 ಕಿ.ಮೀ x 121973 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈ ಕಾರ್ಯಾಚರಣೆಯನ್ನು ಬೆಂಗಳೂರು, ಮಾರಿಷಸ್, ಎಸ್‌ಡಿಎಸ್‌ಸಿ-ಎಸ್ಹೆಚ್ಎಆರ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಇಸ್ರೆೋ ಕೇಂದ್ರಗಳಲ್ಲಿ ಟ್ರ್ಯಾಕ್ ಮಾಡಲಾಗುತ್ತಿದೆ.
ಹಾಗೆಯೇ ಮುಂದಿನ (5ನೇ) ಹಂತದ ಕಕ್ಷೆ ಬದಲಾವಣೆ ಕಾರ್ಯ ಸೆಪ್ಟೆಂಬರ್ 19ರಂದು ನಿಗದಿಯಾಗಿದೆ. ಇದಕ್ಕೂ ಮೊದಲು ಸೆ.5ರಂದು ಆದಿತ್ಯ-ಎಲ್ 1, 2ನೇ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಅದು ಭೂಮಿಯಿಂದ 282 ಕಿ.ಮೀ x 40225 ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿತ್ತು ಎಂದು ಇಸ್ರೋ ತಿಳಿಸಿತ್ತು.
ಇಸ್ರೋ ಸೆ.2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ-ಎಲ್1 ಉಡ್ಡಯನ ಮಾಡಿತ್ತು. ಇದು 7 ವಿಭಿನ್ನ ಪೇಲೋಡ್‌ಗಳನ್ನು ನಭಕ್ಕೆ ಹೊತ್ತೊಯ್ದಿದೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ-ಎಲ್ 1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುತ್ತದೆ. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ.