Log In
BREAKING NEWS >
ಮಾರ್ಚ್ 8ರ೦ದು ಮಹಾಶಿವರಾತ್ರೆ-ಎಲ್ಲಾ ಈಶ್ವರ ದೇವಸ್ಥಾನಗಳಲ್ಲಿ ಭಜನಾ ಸ೦ಕೀರ್ತನೆ ಜರಗಲಿದೆ.....

ಕನ್ನರ್ಪಾಡಿ-ಕಿನ್ನಿಮೂಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸವಸಮಿತಿ ವತಿಯಿಂದ ಸೆ.19ರಿಂದ 24ರವರೆಗೆ “ಶ್ರೀ ಗಣೇಶೋತ್ಸವ”

ಉಡುಪಿ: ಸೆ.16: ಕನ್ನರ್ಪಾಡಿ-ಕಿನ್ನಿಮೂಲ್ಕಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.19ರಿಂದ 24ರವರೆಗೆ ಕಿನ್ನಿಮೂಲ್ಕಿಸ್ವಾಗತಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ನಡೆಯಲಿದೆ. ಪ್ರತೀದಿನ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಯಂಕಾಲ 4.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

ಸಭಾ ಕಾರ್ಯಕ್ರಮ: ಸೆ.19ರ ಸಂಜೆ 7 ಗಂಟೆಗೆ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವು ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮುರಳೀಧರ ಬಲ್ಲಾಳ್‌ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನರ್ಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷಕೆ. ನಾರಾಯಣ ರಾವ್‌ ಕನ್ನರ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕಡೆಕಾರು ಗ್ರಾ.ಪಂ ಉಪಾಧ್ಯಕ್ಷನವೀನ್‌ ಶೆಟ್ಟಿ ಗಿರಿಜಾ ಹೆಲ್ತ್‌ಕೇರ್ ಸೆಂಟರ್‌ನ ರವೀಂದ್ರ ಶೆಟ್ಟಿ ಕಡೆಕಾರು ಹಾಗೂ ಎಲ್ ಐಸಿ ನಿವೃತ್ತ ಆಡಳಿತಾಧಿಕಾರಿ ಸುಧಾಕರ್ ಅವರನ್ನು ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣಪ್ರಸಾದ್‌ ಕೂಡ್ಲು ಸಲಿದ್ದಾರೆ. ಜಿ.ಪಂ. ಮಾಜಿ ಸದಸ್ಯ ದಿವಾಕರ್ ಕುಂದರ್, ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತಸರ ಪ್ರಭಾಶಂಕರ್ ಪದ್ಮಶಾಲಿ ಬಹುಮಾನ ವಿತರಿಸಲಿದ್ದಾರೆ. ವಕೀಲೆ ಸಹನಾ ಕುಂದ‌ ಹಬ್ಬಗಳ ಬಗ್ಗೆ ಅರಿವು ಭಾಷಣ ಮಾಡಲಿದ್ದಾರೆ. ಬಳಿಕ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಮೃತಾ ಕೃಷ್ಣಮೂರ್ತಿ ಮತ್ತು ಕೆ. ಕೃಷ್ಣಮೂರ್ತಿ ಆಚಾರ್ಯ ಇವರಿಂದ ವಿದ್ಯಾನಿಧಿ ನೀಡಿ ಗೌರವಿಸಲಾಗುತ್ತದೆ.

ಸಮಾರೋಪ ಸಮಾರಂಭ: ಸೆ.23ರ ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ ವಹಿಸಲಿದ್ದಾರೆ. ಕಡೆಕಾರು ಗ್ರಾ.ಪಂ. ಅಧ್ಯಕ್ಷ ಜಯಕರ ಶೇರಿಗಾರ್‌, ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರೂಪಮಾ ಪ್ರಸಾದ್ ಶೆಟ್ಟಿ ಕಿನ್ನಿಮೂಲ್ಕಿ ಬಿ.ಬಿ. ನಗರದ ಶಿವಶಂಕರ್ ಹಾಗೂ ಬಲಾಯಿಪಾದೆ ಸಿವಿಲ್ ಕಾಂಟ್ರ್ಯಾಕ್ಟರ್ ರಾಘವ ಸನಿಲ್ ಕಟ್ಟೆಗುಡ್ಡೆ ವಿದ್ಯಾನಿಧಿ ವಿತರಿಸಲಿದ್ದಾರೆ. ಸಮಾಜ ಸೇವಕ ಸದಾಶಿವ ಕಟ್ಟೆಗುಡ್ಡೆ, ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ರವೀಂದ್ರ ಶೆಟ್ಟಿಗಾರ್, ಪಿಡಬ್ಲ್ಯೂಡಿ ಕಾಂಟ್ಯಾಕ್ಟರ್ ಹರೀಶ್ ಜತ್ತನ್ನ ಹಾಗೂ ಬಿ.ಬಿ. ನಗರದ ಸದಾನಂದ ಆಚಾರ್ಯ ಬಹುಮಾನ ವಿತರಿಸಲಿದ್ದಾರೆ. ಸೆ.24ರ ಸಂಜೆ 6ಕ್ಕೆ ರಂಗಪೂಜೆ, ಸಂಜೆ 7ರಿಂದ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ಗಣೇಶೋತ್ಸವ ಸಮಿತಿಯ ಅಧ್ಯಕ್ಷನಾರಾಯಣ ರಾವ್‌, ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

No Comments

Leave A Comment