Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಖ್ಯಾತ ಬಾಲಿವುಡ್ ನಟ ರಿಯೋ ಕಪಾಡಿಯಾ ನಿಧನ

ಮುಂಬೈ: ಖ್ಯಾತ ಬಾಲಿವುಡ್ ನಟ ರಿಯೋ ಕಪಾಡಿಯಾ ನಿಧನರಾಗಿದ್ದು, ಅವರಿಗೆ 66 ವರ್ಷವಾಗಿತ್ತು.

ದಿಲ್ ಚಾಹ್ತಾ ಹೈ, ಚಕ್ ದೇ ಇಂಡಿಯಾ ಮತ್ತು ಹ್ಯಾಪಿ ನ್ಯೂಇಯರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟ ರಿಯೊ ಕಪಾಡಿಯಾ ಇಂದು ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಯೋ ಕಪಾಡಿಯಾ ಅವರು, ಇಂದು ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ಅವರ ಸ್ನೇಹಿತ ಫೈಸಲ್ ಮಲಿಕ್ ಹೇಳಿದ್ದಾರೆ.

ರಿಯೋ ಕಪಾಡಿಯಾ ಅವರು ಮಧ್ಯಾಹ್ನ 12:30 ರ ಸುಮಾರಿಗೆ ನಿಧನರಾದರು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು” ಎಂದು ಮಲಿಕ್ ಹೇಳಿದರು.

ಕಪಾಡಿಯಾ ಹೆಚ್ಚಾಗಿ ಚಲನಚಿತ್ರಗಳು ಮತ್ತು ಟಿವಿ ಶೋಗಳಾದ ಖುದಾ ಹಾಫಿಜ್, ದಿ ಬಿಗ್ ಬುಲ್, ಏಜೆಂಟ್ ವಿನೋದ್, ಕುಟುಂಬ್ ಮತ್ತು ಸಪ್ನೆ ಸುಹಾನೆ ಲಡಕ್ಪಾನ್ ಕೆ ಮುಂತಾದವುಗಳಲ್ಲಿ ರಿಯೋ ಕಪಾಡಿಯಾ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ತೀರಾ ಇತ್ತೀಚೆಗೆ ಮೇಡ್ ಇನ್ ಹೆವನ್ ಸೀಸನ್ ಎರಡರಲ್ಲಿ ಕಾಣಿಸಿಕೊಂಡರು, ಇದರಲ್ಲಿ ಅವರು ಎರಡನೇ ಸಂಚಿಕೆಯಲ್ಲಿ ಮೃಣಾಲ್ ಠಾಕೂರ್ ಅವರ ಪಾತ್ರದ ತಂದೆಯಾಗಿ ನಟಿಸಿದ್ದರು.

ಮುಂಬೈನ ಉಪನಗರದ ಗೋರೆಗಾಂವ್‌ನಲ್ಲಿರುವ ಸ್ಮಶಾನದಲ್ಲಿ ನಟನ ಅಂತಿಮ ಸಂಸ್ಕಾರ ನಾಳೆ ನಡೆಯಲಿದೆ. ಕಪಾಡಿಯಾ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

No Comments

Leave A Comment