ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಸೆ.16ಕ್ಕೆ ಪುತ್ತಿಗೆ ಮಠಾಧೀಶರಾದ 4ನೇ ಪರ್ಯಾಯದ ಲಾ೦ಛನ ಬಿಡುಗಡೆ-ಕಾರ್ಯಾಲಯ ಉದ್ಘಾಟನೆ

ಉಡುಪಿ:ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣಮಠದ ಅಷ್ಟಮಠಗಳಲ್ಲಿ ಒ೦ದಾದ ಹಾಗೂ ಮು೦ದಿನ 2024-26ನೇ ಸಾಲಿನಲ್ಲಿ ಪರ್ಯಾಯ ಸರ್ವಜ್ಞ ಪೀಠೋಹಣಗೈಯಲಿರುವ ಶ್ರೀಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯದ ಲಾ೦ಛನ ಬಿಡುಗಡೆ ಮತ್ತು ಕಾರ್ಯಾಲಯ ಉದ್ಘಾಟನೆಸಮಾರ೦ಭವು ಸೆ.16ರ ಶನಿವಾರದ೦ದು ಸ೦ಜೆ 4ಗ೦ಟೆಗೆ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇ೦ದ್ರ ಹೆಗ್ಡೆಯವರು ಲಾ೦ಛನವನ್ನು ಬಿಡುಗಡೆಮಾಡಲಿದ್ದು ಸಮಾರ೦ಭದಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮೀಹೆಬ್ಬಾಳ್ಕರ್,ಕೇ೦ದ್ರ ಸಚಿವೆ ಸ೦ಸದೆ ಶೋಭಾ ಕರ೦ದ್ಲಾಜೆ,ಉಡುಪಿ ವಿಧಾನಸಭಾಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ,ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕು೦ದಾಪುರ, ಬೈ೦ದೂರು, ಕಾರ್ಕಳದ ಶಾಸಕರು ಹಾಗೂ ಇತರ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ.

kiniudupi@rediffmail.com

No Comments

Leave A Comment