ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
2020ರ ಗಲಭೆ ಪ್ರಕರಣ: ಚಾರ್ಜ್‌ಶೀಟ್ ವಿಳಂಬಕ್ಕೆ ಜಿ20 ಶೃಂಗಸಭೆಯನ್ನು ಉಲ್ಲೇಖಿಸಿದ ದೆಹಲಿ ಪೊಲೀಸರಿಗೆ ಕೋರ್ಟ್ ತರಾಟೆ!
ನವದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪೂರಕ ಆರೋಪಪಟ್ಟಿ ಸಲ್ಲಿಸಲು ವಿಫಲವಾಗಿರುವ ದೆಹಲಿ ಪೊಲೀಸರನ್ನು ದೆಹಲಿ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ಸೆಪ್ಟೆಂಬರ್ 9-10ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ತನಿಖಾಧಿಕಾರಿ(ಐಒ) ಕಾರ್ಯನಿರತವಾಗಿರುವುದು ವಿಳಂಬಕ್ಕೆ ಕಾರಣ ಎಂದು ದೆಹಲಿ ಪೊಲೀಸರು ಉಲ್ಲೇಖಿಸಿದ್ದರು.
ಇದಕ್ಕೆ ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಪೊಲೀಸರು ನೀಡಿದ ವಿವರಣೆಗೆ ಅತೃಪ್ತಿ ವ್ಯಕ್ತಪಡಿಸಿದರು. ಕಾನೂನು ಜಾರಿ ಸಂಸ್ಥೆಗಳು ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದ ತಮ್ಮ ಜವಾಬ್ದಾರಿಗಳನ್ನು ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದ ಜವಾಬ್ದಾರಿಗಳೊಂದಿಗೆ ಸಮತೋಲನಗೊಳಿಸಬೇಕು ಎಂದು ಹೇಳಿದರು.
ತನಿಖಾ ಕಾರ್ಯಗಳನ್ನು ಪೂರ್ಣಗೊಳಿಸಲು ನ್ಯಾಯಾಲಯ ನೀಡಿರುವ ವಿಸ್ತೃತ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಪ್ರಕರಣವು 2020ರ ಎಫ್‌ಐಆರ್ ಸಂಖ್ಯೆ 188ಗೆ ಸಂಬಂಧಿಸಿದೆ, ಇದನ್ನು ಖಜೂರಿ ಖಾಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಗಲಭೆಯ ಗುಂಪು ತನ್ನ ಮನೆಗೆ ನುಗ್ಗಿ ಧ್ವಂಸ ಮಾಡಿದೆ ಎಂದು ದೂರುದಾರ ಸಮೀಜಾ ಆರೋಪಿಸಿದ್ದರು. ನಂತರ ಇನ್ನೂ 10 ಜನರು ಇದೇ ರೀತಿಯ ದೂರುಗಳೊಂದಿಗೆ ಮುಂದೆ ಬಂದರು. ಅವರ ಪ್ರಕರಣಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.
ಠಾಣಾಧಿಕಾರಿ (ಎಸ್‌ಎಚ್‌ಒ) ಮತ್ತು ಐಒ ಅವರು ಪೂರಕ ಆರೋಪಪಟ್ಟಿ ಮತ್ತು ಪಪ್ಪನ್ ಸಲ್ಲಿಸಿದ ದೂರನ್ನು ಹಿಂಪಡೆಯಲು ಜುಲೈ 20ರಂದು ಹೆಚ್ಚುವರಿ ಸಮಯ ಕೋರಿದರು. ಆದಾಗ್ಯೂ, ಎಸ್‌ಎಚ್‌ಒ ಅವರು ಹೈಕೋರ್ಟ್‌ನಲ್ಲಿ ಕಾರ್ಯನಿರತರಾಗಿದ್ದಾರೆ. ಜಿ20 ಶೃಂಗಸಭೆಯ ಕಾರಣ ತನಿಖಾಧಿಕಾರಿಗಳು ಬಹುಶಃ ಅಲಭ್ಯರಾಗಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಇದರಿಂದಾಗಿ ಪೂರಕ ಚಾರ್ಜ್ ಶೀಟ್ ಸಲ್ಲಿಕೆಯಾಗಲೀ, ಅರ್ಜಿ ಸಲ್ಲಿಸಲಾಗಲೀ ಆಗಿಲ್ಲ.