ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಲಿಬಿಯಾದಲ್ಲಿ ಚಂಡಮಾರುತದಿಂದ ಭಾರೀ ಪ್ರವಾಹ – 2,000 ಮಂದಿ ಸಾವು

ಲಿಬಿಯಾ: ಸೆ 12.ಉತ್ತರ ಆಫ್ರಿಕಾದ ಲಿಬಿಯಾದಲ್ಲಿ ದೊಡ್ಡ ದುರಂತವೊಂದು ನಡೆದಿದೆ. ಭಾರೀ ಮಳೆ ಮತ್ತು ಪ್ರವಾಹದಿಂದ 2,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಲಿಬಿಯಾ ದೇಶದ ಪ್ರಧಾನಿ ಒಸಾಮಾ ಹಮದ್ ತಿಳಿಸಿದ್ದಾರೆ.

ಸುಮಾರು 5-6 ಸಾವಿರ ಜನರು ನಾಪತ್ತೆಯಾಗಿದ್ದಾರೆ. ಮೆಡಿಟರೇನಿಯನ್ ಸಮುದ್ರದಲ್ಲಿ ಡೇನಿಯಲ್ ಚಂಡಮಾರುತವು ಈ ಅನಾಹುತಕ್ಕೆ ಕಾರಣವಾಗಿದೆ. ಪ್ರಮುಖವಾಗಿ ‘ಡೆರ್ನಾ’ ನಗರದ ಬಳಿ ಜಲಾಶಯಗಳು ಹೆಚ್ಚಾಗಿದ್ದು, ಭಾರೀ ಪ್ರವಾಹ ಉಂಟಾಗಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಘಟನೆಯ ಹಿನ್ನಲೆಯಲ್ಲಿ ಪ್ರಧಾನಿ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದರು.

No Comments

Leave A Comment