14 ಲಕ್ಷ ಮೌಲ್ಯದ ಡ್ರಗ್ಸ್ ಪ್ರಕರಣ: ವರಲಕ್ಷ್ಮಿ ಟಿಫನ್ಸ್ ಮಾಲಿಕ ಸೇರಿ ಮೂವರ ಬಂಧನ
ಹೈದರಾಬಾದ್: ಆಂಧ್ರಪ್ರದೇಶದ ಖ್ಯಾತ ವರಲಕ್ಷ್ಮಿ ಟಿಫನ್ಸ್ ನ ಮಾಲಿಕ ಪ್ರಭಾಕರ್ ರೆಡ್ದಿ ಹಾಗೂ ಅವರ ಸಹಾಯಕ ವೆಂಕಟ ಶಿವ ಸಾಯಿ ಕುಮಾರ್ (ಪಲ್ಲೇತುರು ಪುಲ್ಲಟ್ಲು ಮಾಲಿಕ) ಹಾಗೂ ಗ್ರಾಹಕ-ಪೆಡ್ಲರ್ ನ್ನು ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಕೊಕೆನ್, ಎಂಡಿಎಮ್ಎ ಮುಂತಾದ ಡ್ರಗ್ಸ್ ಗಳನ್ನು ಗೋವಾದಿಂದ ನಗರಕ್ಕೆ ಅಕ್ರಮ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ.
ಪೊಲೀಸ್ ಅಧಿಕಾರಿಗಳು 14 ಲಕ್ಷ ಮೌಲ್ಯದ ಅಕ್ರಮ ಡ್ರಗ್ಸ್ 97,500 ರೂಪಾಯಿ ಮೊತ್ತದ ನಗದು, 3 ಕಾರು ಹಾಗೂ 5 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಹಕರೂ ಆಗಿರುವ ಪೆಡ್ಲರ್ ಅನುರಾಧ ಪ್ರಮುಖ ಆರೋಪಿಯಾಗಿದ್ದು, ಗೋವಾದಲ್ಲಿ ಹಲವು ವರ್ಷಗಳಿಂದ ಡ್ರಗ್ಸ್ ನ್ನು ಸಂಗ್ರಹಿಸುತ್ತಿದ್ದರು. ಹಣ ಸಂಪಾದನೆಗೆ ಡ್ರಗ್ಸ್ ನ್ನು ಹೈದರಾಬಾದ್ ಗೆ ಸಾರ್ವಜನಿಕ ಸಾರಿಗೆಯ ಮೂಲಕ ಡ್ರಗ್ಸ್ ಸಾಗಿಸುತ್ತಿದ್ದರು ಈ ವೇಳೆ ಈ ಆರೋಪಿ ಪ್ರಭಾಕರ್ ಹಾಗೂ ವೆಂಕಟಗೆ ಪರಿಚಯವಾಗಿದ್ದಾರೆ. ಪ್ರಭಾಕರ್ ಹಾಗೂ ವೆಂಕಟ ಸ್ಥಳೀಯ ಆಹಾರ ಉದ್ಯಮದಲ್ಲಿ ಚಿರಪರಿಚಿತ ಹೆಸರಾಗಿದೆ. ಆದರೆ ಅವರು ಅಕ್ರಮ ಡ್ರಗ್ಸ್ ನ ಗ್ರಾಹಕರೂ ಆಗಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ