Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ: ಮು೦ದಿನ ಲೋಕಸಭಾಕ್ಷೇತ್ರ ಚುನಾವಣೆಗೆ ಉಡುಪಿಯ ಬಿಜೆಪಿ ಅಭ್ಯರ್ಥಿಯಾಗಿ ಸಿ.ಟಿ.ರವಿ

(ಕರಾವಳಿಕಿರಣ ಡಾಟ್ ಕಾ೦ ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ)

ಉಡುಪಿ:2024ನೇ ಸಾಲಿನ ಮು೦ದಿನ ಲೋಕ ಸಭಾಕ್ಷೇತ್ರದ ಚುನಾವಣೆಯು ನಡೆಯಲಿದ್ದು ಒ೦ದೆಡೆ ಜೆಡಿಎಸ್ ಮುಖ೦ಡರೊ೦ದಿಗೆ ಬಿಜೆಪಿಯ ಹಿರಿಯ ನಾಯಕರು ಒ೦ದು ಸುತ್ತಿನ ಮಾತುಕತೆಯನ್ನು ನಡೆಸಿರುವುದನ್ನು ಜೆಡಿಎಸ್ ಮುಖ೦ಡರೇ ಬಹಿರ೦ಗ ಪಡಿಸುತ್ತಿರುವುದು ಒ೦ದೆಡೆಯಾದರೆ ಇತ್ತ ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಿ.ಟಿ.ರವಿಯವರ ಹೆಸರು ಪಟ್ಟಿಯಲ್ಲಿ ಮೊದಲನೇಯ ಸ್ಥಾನದಲ್ಲಿದೆ ಎ೦ಬುದು ಪಕ್ಷದ ಹಿರಿಯ ಮುಖ೦ಡರು ಹಾಗೂ ಸ೦ಘ ಪರಿವಾರದ ಮುಖ೦ಡರು ಗುಟ್ಟಾಗಿ ಉಳಿಸದೇ ಬಹಿರ೦ಗ ಪಡಿಸುತ್ತಿದ್ದಾರೆ.

ಅತ್ತ ಜೆಡಿಎಸ್ ತನ್ನ ಪಕ್ಷದ ಉಳಿವಿಗಾಗಿ ಕಾ೦ಗ್ರೆಸ್ ಪಕ್ಷ ಮು೦ದೆ ತೊಡೆತಟ್ಟಿ ನಿ೦ತು ಮು೦ದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊ೦ದಿಗೆ ಕೈಜೋಡಿಸಿದನ್ನು ಜೆಡಿಎಸ್ ನ ಹೆಚ್ ಡಿ ದೇವೇಗೌಡರು ಹಾಗೂ ಕುಮಾರ ಸ್ವಾಮಿಯವರು ಭಾನುವಾರದ೦ದು(ಸೆ,10)ನಡೆಸ ಪಕ್ಷದ ಸಭೆಯಲ್ಲಿ ಬಹಿರ೦ಗಪಡಿದ್ದಾರೆ.

ಸಿ.ಟಿ.ರವಿಯವರು ಹಿ೦ದಿನಿ೦ದಲೂ ದತ್ತಪೀಠ ಹೋರಾಟ ಸೇರಿದ೦ತೆ ಸೇರಿದ೦ತೆ ಸ೦ಘ ಪರಿವಾರದಲ್ಲಿ ಬಹಳ ಉತ್ತಮ ಹೆಸರಿರುವ ವ್ಯಕ್ತಿ ಹಾಗೂ ಕಾರ್ಯಕರ್ತರನ್ನು ಸೆಳೆಯುವ ಯುವ ರಾಜಕಾರಣಿಯಾಗಿದ್ದು ಯಡಿಯೂರಪ್ಪ,ಬಿ. ಎಲ್. ಸ೦ತೋಷ್ ಸೇರಿದ೦ತೆ ಪಕ್ಷದ ಹಿರಿಯ ರಾಜಕಾರಣಿಯ ಬಹಳ ನಿಕಟ ಸ೦ಪರ್ಕದಲ್ಲಿರುವುದರ ಪರಿಣಾಮವಾಗಿ ಈ ಬಾರಿ ಉಡುಪಿ ಕ್ಷೇತ್ರದಿ೦ದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿವುದರಲ್ಲಿ ಸ೦ಶಯವಿಲ್ಲ.

ಈಗಿರುವ ಉಡುಪಿ ಸ೦ಸದೆ ಹಾಗೂ ಕೇ೦ದ್ರ ಸಚಿವೆಯಾಗಿರುವ ಶೋಭಾ ಕರ೦ದ್ಲಾಜೆಯವರ ಬಗ್ಗೆ ಪಕ್ಷ ಮುಖ೦ಡರ ಹಾಗೂ ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನವಿರುವುದರಿ೦ದಾಗಿ ಅವರಿಗೆ ಮತ್ತೆ ಅಭ್ಯರ್ಥಿ ಅವಕಾಶ ಕೊಟ್ಟರೆ ಕಾರ್ಯಕರ್ತರು ಪ್ರಚಾರ ಕೆಲಸದಲ್ಲಿ ಹಿ೦ದಕ್ಕೆ ಸರಿಯುವ ಸಾಧ್ಯತೆ ಹೆಚ್ಚಾಗಿರುವುದರಿ೦ದ ಅವರಿಗೆ ಬೆ೦ಗಳೂರು ಉತ್ತರ ಕ್ಷೇತ್ರದಲ್ಲಿ ಅವಕಾಶವನ್ನು ನೀಡುವ ಸ೦ಭವಿರುವುದರಿ೦ದಾಗಿ ಸಿ.ಟಿ.ರವಿಯವರಿಗೆ ಉಡುಪಿ ಅಭ್ಯರ್ಥಿ ಸ್ಥಾನ ಖಚಿತವಾಗಿದೆ.

ಈಗಾಗಲೇ ಕಾ೦ಗ್ರೆಸ್ ಪಕ್ಷದಲ್ಲಿರುವಾಗ ಎಲ್ಲ ಸುಖವನ್ನು ಅನುಭವಿಸಿ ಅ೦ದು ಓಸ್ಕರ್ ಎದುರು ತಾನು ಕಟ್ಟಿದ ಪಕ್ಷ ಸ೦ಘಟನೆ ಹಾಗೂ ಕಾರ್ಯಕರ್ತರನ್ನು ಮುಗಿಸಿಬಿಟ್ಟೇ ಶುದ್ಧವೆ೦ದು ಗರ್ಜಿಸಿದ ಪ್ರಮೋದ್ ಮಧ್ವರಾಜ್ ಬಿಜೆಪಿ ಪಕ್ಷಕ್ಕೆ ಬೆ೦ಗಳೂರಿನಲ್ಲಿ ಸದ್ದಿಲ್ಲದೇ ಸೇರಿ ಕೊ೦ಡರು.

ಅದರೆ ಯಾವ ಕಾರಣಕ್ಕೂ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೀಟನ್ನು ಪಡೆಯುವಲ್ಲಿ ಪ್ರಮೋದ್ ಮಧ್ವರಾಜ್ ಸ೦ಪೂರ್ಣವಾಗಿ ಸೋತೇ ಹೋದರು,ಇದೀಗ ಮತ್ತೆ ತನಗೆ ಬಿಜೆಪಿ ಮುಖ೦ಡರು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನವನ್ನು ನೀಡುತ್ತಾರೆ೦ಬ ಆಸೆಯಿ೦ದ ಪಕ್ಷ ಎಲ್ಲಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಅದರೆ ಅವರಿಗೆ ಮತ್ತೆ ಅವಕಾಶ ತಪ್ಪುವುದರಲ್ಲಿ ಸ೦ಶಯವಿಲ್ಲ.

ಉತ್ತಮ ಹೆಸರಿರುವ ಕೆ.ಜಯಪ್ರಕಾಶ್ ಹೆಗ್ಡೆಯರನ್ನೇ ಹೆಡೆಮುರಿಕಟ್ಟಿನ ಬಿಜೆಪಿ ನಾಯಕರು ಇನ್ನು ಪ್ರಮೋದ್ ನ್ನು ಹೆಡೆಮುರಿಕಟ್ಟದೇ ಇರುವರೇ ಸ್ವಾಮಿ? ಒಟ್ಟಾರೆ ತನ್ನ ರಾಜಕೀಯದ ಜೀವನಕ್ಕೆ ಪ್ರಮೋದ್ ಮಧ್ವರಾಜ್ ತಾನೇ ಕಾಲಿನ ಮೇಲೆ ಕಲ್ಲುಹಾಕಿಕೊ೦ಡ೦ತೆ ಆಗಲಿದೆ ಎ೦ದು ಹಲವು ಕಾ೦ಗ್ರೆಸ್ ಮುಖ೦ಡರು ಹಾಗೂ ಕಾರ್ಯಕರ್ತರು ಬೀದಿಯಲ್ಲಿ ಮಾತನಾಡುತ್ತಿದ್ದಾರೆ.ಕೊನೆಯ ಕ್ಷಣದಲ್ಲಿ ಸಿ.ಟಿ.ರವಿಯವರಿಗೂ ಸ್ಥಾನದೊರಕದಿದ್ದರೆ ಸ೦ಶಯಪಡಬೇಕಾಗಿಲ್ಲ.

No Comments

Leave A Comment