ದೆಹಲಿಯಲ್ಲಿ ಜಿ20 ಶೃಂಗಸಭೆ ಅಂತ್ಯ, ಮುಂದಿನ ವರ್ಷ ಬ್ರೆಜಿಲ್ ನಲ್ಲಿ: ಅಧಿಕಾರ ದಂಡವನ್ನು ಬ್ರೆಜಿಲ್ ಅಧ್ಯಕ್ಷರಿಗೆ ಹಸ್ತಾಂತರಿಸಿದ ಪ್ರಧಾನಿ ಮೋದಿ
ನವದೆಹಲಿ: ಮುಂದಿನ ವರ್ಷ ಜಿ20 ಅಧ್ಯಕ್ಷ ಸ್ಥಾನವನ್ನು ಬ್ರೆಜಿಲ್ ಗೆ ವರ್ಗಾಯಿಸುವ ಮೂಲಕ ದೆಹಲಿಯಲ್ಲಿ ಎರಡು ದಿನಗಳ ಜಿ20 ಶೃಂಗಸಭೆ ಇಂದು ಭಾನುವಾರ ಮುಕ್ತಾಯಗೊಂಡಿದೆ.
ಜಿ 20 ಅಧ್ಯಕ್ಷ ಸ್ಥಾನದ ಅಧಿಕಾರದ ದಂಡವನ್ನು ವಿದ್ಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ಬ್ರೆಜಿಲ್ ಅಧ್ಯಕ್ಷರು, ಆರ್ಥಿಕತೆಗಳ ಹಿತಾಸಕ್ತಿಗಳ ವಿಷಯಗಳಿಗೆ ಧ್ವನಿ ನೀಡುತ್ತಿರುವ ಭಾರತವನ್ನು ಶ್ಲಾಘಿಸಿದರು.
ಸಮಾರೋಪ ಅಧಿವೇಶನದಲ್ಲಿ, ಮೋದಿ ಅವರು ಗೇಲ್ ನ್ನು ಹಸ್ತಾಂತರಿಸಿ ಬ್ರೆಜಿಲ್ ಅಧ್ಯಕ್ಷ ಸ್ಥಾನಕ್ಕೆ ಶುಭ ಹಾರೈಸಿದರು. ಬ್ರೆಜಿಲ್ ಅಧಿಕೃತವಾಗಿ ಈ ವರ್ಷದ ಡಿಸೆಂಬರ್ 1 ರಂದು ಗಣ್ಯ ಗುಂಪಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.
ಲುಲಾ ಡ ಸಿಲ್ವಾ ಅವರು ಸಾಮಾಜಿಕ ಸೇರ್ಪಡೆ, ಹಸಿವಿನ ವಿರುದ್ಧದ ಹೋರಾಟ, ಶಕ್ತಿ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು G20 ಆದ್ಯತೆಗಳಾಗಿ ಪಟ್ಟಿ ಮಾಡಿದ್ದಾರೆ.