ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ:ಸೆ. 9: ಮಣಿಪುರದ ವಿದ್ಯಮಾನ ಸಂವಾದ
ಉಡುಪಿ: ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗ ವತಿಯಿಂದ ನಡೆಯುವ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 9ರಂದು ಅಪರಾಹ್ನ 4 ಗಂಟೆಗೆ ಸೃಜನಾತ್ಮಕ ಭಾರತೀಯ ಅಸ್ಮಿತೆ ಮತ್ತು ಮಣಿಪುರದ ವಿದ್ಯಮಾನಗಳು ಕುರಿತು ಚಿಂತನ ಮತ್ತು ಸಂವಾದ ನಡೆಯಲಿದೆ.
ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ನಟ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ ಮಾತನಾಡಲಿದ್ದು, ಚಿಂತಕ ರೋಹಿತ್ ಚಕ್ರತೀರ್ಥ ಸಂವಾದ ನಡೆಸಿಕೊಡುವರು.
ಕಾರ್ಯಕ್ರಮ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಬಳಗದ ಪ್ರಕಟಣೆ ತಿಳಿಸಿದೆ.