ಉಡುಪಿಯಲ್ಲಿ ಎನ್ ಕೌಂಟರ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಸಾವು....ಮಹಾ ಚುನಾವಣೆ: ಮತದಾರರು ಬೂತ್‌ಗಳಿಗೆ ತೆರಳಲು QR ಕೋಡ್ ಪರಿಚಯ...ನವೆಂಬರ್ 25ರಿಂದ ಸಂಸತ್ ಚಳಿಗಾಲದ ಅಧಿವೇಶನ: ಭಾನುವಾರ ಸರ್ವಪಕ್ಷ ಸಭೆ...
ಮಾಲಿ: ದೋಣಿ , ಸೇನಾ ನೆಲೆಯ ಮೇಲೆ ಉಗ್ರರ ದಾಳಿ 64 ಮಂದಿ ಸಾವು
ಬಮಾಕೊ:ಸೆ 08. ಉತ್ತರ ಮಾಲಿಯ ನೈಜರ್ ನದಿಯಲ್ಲಿ ಗುರುವಾರ ಸೇನಾ ನೆಲೆ ಮತ್ತು ಪ್ರಯಾಣಿಕರ ಇದ್ದ ಬೋಟ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ 64 ಮಂದಿ ಮೃತಪಟ್ಟಿದ್ದಾರೆ ಎಂದು ಮಾಲಿಯನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಜರ್ ನದಿಯಲ್ಲಿನ ಟಿಂಬಕ್ಟು ಬೋಟ್ ಮತ್ತು ಉತ್ತರ ಗಾವೊ ಪ್ರದೇಶದ ಬಾಂಬಾದಲ್ಲಿ ಸೇನಾ ಸ್ಥಾನವನ್ನು ಗುರಿಯಾಗಿರಿಸಿಕೊಂಡು ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದು, 49 ನಾಗರಿಕರು ಮತ್ತು 15 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ. ಈ ಕೃತ್ಯ ಅಲ್-ಖೈದಾಗೆ ಸಂಯೋಜಿತವಾದ ಗುಂಪಿನಿಂದ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ನದಿಯಲ್ಲಿ ಚಲಿಸುತ್ತಿದ್ದ ಬೋಟ್ ಮತ್ತು ಅದರ ಎಂಜಿನ್ ಅನ್ನು ಗುರಿಯಾಗಿರಿಸಿಕೊಂಡು ಕನಿಷ್ಟ ಮೂರು ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಬೋಟ್ ನಿರ್ವಾಹಕ ತಿಳಿಸಿದ್ದಾರೆ.
ಅಲ್ -ಖೈದಾ ಸಂಯೋಜಿತ ಮೈತ್ರಿಕೂಟ, ಇಸ್ಲಾಂ ಮತ್ತು ಮುಸ್ಲಿಮರ ಬೆಂಬಲ ಗುಂಪು ಕಳೆದ ತಿಂಗಳು ಉತ್ತರ ಮಾಲಿಯ ಐತಿಹಾಸಿಕ ಕ್ರಾಸ್‌ರೋಡ್ ನಗರವಾದ ಟಿಂಬಕ್ಟುವನ್ನು ನಿರ್ಬಂಧಿಸುವುದಾಗಿ ಘೋಷಿಸಿದ ಬಳಿಕ ಈ ದಾಳಿ ನಡೆದಿದೆ.